ಡಿವಿಜಿ ಸುದ್ದಿ, ಬೆಂಗಳೂರು: ಜಮೀರ್ ಅಹಮ್ಮದ್ ಕೊಲಂಬೊ ಪ್ರವಾಸ ಮಾಡಿದ್ದರೆ ತಪ್ಪೇನೂ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಯಾಸಿನೋಗೆ ಹೋಗದು ತಪ್ಪಲ್ಲ. ಡ್ರಗ್ಸ್ ವ್ಯವಹಾರದಲ್ಲಿ ಭಾಗಿಯಾಗಿದ್ದರೆ ತಪ್ಪು.ಈ ಬಗ್ಗೆ ಕ್ಯಾಸಿನೋಗೆ ಹೋಗಿರುವುದನ್ನು ಕುಮಾರಸ್ವಾಮಿ ಮತ್ತು ಜಮೀರ್ ಅಹಮ್ಮದ್ ಒಪ್ಪಿಕೊಂಡಿದ್ದಾರೆ. ಈ ಕುರಿತು ನೀವು ಹೆಚ್ಚಿನದನ್ನು ಅವರ ಬಳಿ ಕೇಳಬೇಕು. ನಾನು ಹೆಚ್ಚು ಮಾತನಾಡುವುದಿಲ್ಲ ಎಂದರು.
ನಾನು ಕೂಡ ವಿದೇಶಕ್ಕೆ ಹೋಗಿದ್ದಾಗ ಕ್ಯಾಸಿನೋ ಆಡುವ ಸ್ಥಳವನ್ನು ನೋಡಿದ್ದೇನೆ. ಅಲ್ಲಿ ಆಟ ಆಡಿಲ್ಲ. ಜಮೀರ್ ಅಹಮ್ಮದ್ ಕೊಲಂಬೊ ಪ್ರವಾಸ ಮಾಡಿದ್ದರೆ ತಪ್ಪೇನೂ ಎಂದು ಪ್ರಶ್ನಿಸಿದ್ದಾರೆ



