ಡಿವಿಜಿ ಸುದ್ದಿ. ಬೆಂಗಳೂರು : ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪದಲ್ಲಿ ಸಿಲುಕಿ ದೆಹಲಿ ತಿಹಾರ್ ಜೇಲು ಸೇರಿದ್ದ ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಶನಿವಾರ ಬೆಂಗಳೂರಿಗೆ ಆಗಮಿಸಿದ್ರೂ, ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದರು.
ಕೆಂಪೇಗೌಡ ನಿಲ್ದಾಣದಿಂದ ಕೆಪಿಸಿಸಿ ಕಚೇರಿ ವರೆಗೆ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿ ಸ್ವಾಗತಕೋರಿದರು. ಡಿಕೆಶಿ ಪರ ಘೋಷಣೆ ಕೂಗಿ ಜೈಕಾರ ಹಾಕಿದರು.
ಅದ್ದೂರಿ ಸ್ವಾಗತದ ನಂತರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ನನ್ನ ಅಂತ್ಯದ ಕಾಲವಲ್ಲ.ಇದೀಗ ತಾನೆ ಆರಂಭವಾಗಿದೆ. ನಾನು ಯಾವುದೇ ಮಾಡಿಲ್ಲ, ಅನ್ಯಾಯ ಮಾಡಿಲ್ಲ. ಆದರೂ ಜೈಲಿಗೆ ಹಾಕಿದರು. ಜೈಲಿಗೆ ಹಾಕಿದರೆ ನನ್ನ ಅಂತ್ಯ ಅಂತಾ ಕೆಲವರು ತಿಳಿದುಕೊಂಡಿದ್ದಾರೆ. ಆದರೆ, ಇದು ಅಂತ್ಯವಲ್ಲ. ಇದೀಗ ಆರಂಭದ ಕಾಲ ಎನ್ನುವ ಮೂಲಕ ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ರು.
ನಾನು ತಪ್ಪು ಮಾಡಿದ್ದರೆ ನನ್ನನ್ನು ನೇಣಿಗೇರಿಸಲಿ. ನಾನು ಕಾನೂನು ಪಾಲನೆ ಮಾಡುವವನು. ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ನನ್ನನ್ನು ಯಾರೂ ದುರ್ಬಲಗೊಳಿಸಲು ಆಗಲ್ಲ. ಡಿಕೆಶಿ ಯಾವುದಕ್ಕೂ ಹೆದರುವ ಮಾತೇ ಇಲ್ಲ. ನಾನು ಸುಮ್ಮನೆ ಕೂರುವವನಲ್ಲ. ಎಲ್ಲವನ್ನೂ ಧೈರ್ಯದಂದಲೇ ಎದುರಿಸುತ್ತೇನೆ ಎಂದರು.
ಹೋರಾಟದ ಹಾದಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.. ಜೈಲಿನ ಏಕಾಂತದಲ್ಲಿ ನನ್ನ ಆತ್ಮವಿಶ್ವಾಸ ಗಟ್ಟಿಯಾಗಿದೆ.ನಾನು ಮೂಲತಃ ಕೃಷಿಕ, ಉದ್ಯಮಿ, ಶಿಕ್ಷಣ ಸಂಸ್ಥೆ ನಡೆಸುತ್ತಿರುವವನು ಹಾಗೂ ರಾಜಕಾರಣಿ. ವಿದ್ಯಾರ್ಥಿ ದಿಸೆಯಿಂದಲೇ ನಾಯಕತ್ವ ಗುಣ ಹೊಂದಿದ್ದೆ. ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ ನಬೆಂಬಲ ನೀಡಿದರು ಎಂದರು.
ಪಕ್ಷದ ನಾಯಕರು ನೀಡಿದ ಸೂಚನೆಯನ್ನು ಇಂದಿಗೂ ಪಾಲಿಸಿದ್ದೇನೆ. ಹಲವಾರು ಬಾರಿ ನೆರೆ ರಾಜ್ಯದ ಶಾಸಕರು ಬೆಂಗಳೂರಿಗೆ ಬಂದಾಗ ಹೈಕಮಾಂಡ್ ನಾಯಕರು ಸೂಚನೆ ನೀಡುತ್ತಿದ್ದರು. ಅದರಂತೆ ನಡೆದುಕೊಂಡು ಬಂದಿದ್ದೇನೆ ಎಂದರು.



