ಡಿವಿಜಿ ಸುದ್ದಿ, ಕಲಬುರಗಿ: ಕೆಪಿಸಿಸಿ ಅಧ್ಯಕ್ಷ ಹುದ್ದೆ ಖಾಲಿ ಇಲ್ಲ. ಆ ಹುದ್ದೆಗೆ ನಾನು ಅರ್ಜಿನೂ ಹಾಕಿಲ್ಲ. ದಿನೇಶ್ ಗುಂಡೂರಾವ್ ನಮ್ಮ ನಾಯಕರು ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಾನು ಕೆಪಿಸಿಸಿ ಹುದ್ದಗೆ ಅರ್ಜಿ ಹಾಕಿಲ್ಲ. ಆಕಾಂಕ್ಷಿನೂ ಅಲ್ಲ. ಸದ್ಯ ದಿನೇಶ ಗುಂಡೂರಾವ್, ಸಿದ್ದರಾಮಯ್ಯ ಇದ್ದರಲ್ಲ..! ಮನಸ್ಸಿಗೆ ದುಗುಡವಾಗಿ ರಾಜೀನಾಮೆ ನೀಡಿದ್ದಾರೆ. ಅವರು ನೀಡಿರುವ ರಾಜೀನಾಮೆಯನ್ನು ಪಕ್ಷದ ವರಿಷ್ಠರು ಅಂಗೀಕರಿಸಿಲ್ಲ. ಹೀಗಾಗಿ ಕೆಪಿಸಿಸಿ ಹುದ್ದೆ ಸಹ ಖಾಲಿ ಇಲ್ಲ. ಈ ಸಂದರ್ಭದಲ್ಲಿ ನಾನು ಯಾಕೆ ಮಾತನಾಡಲಿ ಎಂದರು.
ದಿನೇಶ್ ಗುಂಡೂರಾವ್ ನಮ್ಮ ನಾಯಕರು. ಅಧ್ಯಕ್ಷರ ಆಯ್ಕೆ ತಡವಾಗಿದೆ ಎನ್ನುವುದಕ್ಕೆ ನಾನು ಆಕಾಂಕ್ಷಿಯಲ್ಲ, ಅರ್ಜಿ ಸಹ ಹಾಕಿಲ್ಲ. ನನಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಬಗ್ಗೆ ನನಗೆ ಏನು ಗೊತ್ತಿಲ್ಲ.



