ಡಿವಿಜಿ ಸುದ್ದಿ, ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ನೇಮಕ ಕುರಿತು ಸಂಬಂಧಪಟ್ಟವರನ್ನು ಕೇಳಿ. ಎಐಸಿಸಿ ಅಧ್ಯಕ್ಷರು ಅಂಗಡಿಯಲ್ಲಿ ಸಿಗುವ ವಸ್ತು ಅಲ್ಲ, ಈ ಬಗ್ಗೆ ಅಧ್ಯಕ್ಷರನ್ನು ಭೇಟಿ ಮಾಡಿಲ್ಲ. ಕೆಪಿಸಿಸಿ ಅಧ್ಯಕ್ಷ ವಿಚಾರ ನಾನಂತೂ ಏನು ಮಾತನಾಡಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸದಾಶಿವ ನಗರದ ನಿವಾಸದಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ನನಗೇನು ಅತುರ ಇಲ್ಲ. ಕನಕಪುರದಲ್ಲಿ ಕಲ್ಲು ಒಡೆಯುತ್ತೇನೆ. ರೇಷ್ಮೆ, ಕಡಲೆ, ಅರಿಶಿನ ಬೆಳೆಯುತ್ತೇನೆ. ಆದರೆ, ದೆಹಲಿಗೆ ಹೋಗಲ್ಲ. ರಾಜ್ಯದಲ್ಲಿಯೇ ರಾಜಕಾರಣ ಮಾಡುತ್ತೇನೆ ಎನ್ನುವ ಮೂಲಕ ರಾಜ್ಯ ರಾಜಕಾರಣ ಬಿಟ್ಟು ಬೇರೆ ಎಲ್ಲೋ ಹೋಗಲ್ಲ ಎಂಬ ಸ್ಪಷ್ಟ ಸಂದೇಶ ಸಾರಿದ್ದಾರೆ. ಈ ಮೂಲಕ ಕೆಪಿಸಿಸಿ ಪ್ರಬಲ ಆಕಾಂಕ್ಷಿ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸಿಬಿಐ ಯಾವುದೇ ನೋಟಿಸ್ ನನಗೆ ಕೊಟ್ಟಿಲ್ಲ. ಕೇಂದ್ರ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಸಿಬಿಐ ಅವರಿಗೆ ನನ್ನ ಮನೆ ಸುತ್ತಲೂ ಇರುವಂತೆ ಸೂಚಿಸಿದ್ದಾರೆ. ರಾಜ್ಯದಲ್ಲಿ ಲೋಕಾಯುಕ್ತ, ಎಸಿಬಿ ಇದ್ದರೂ ಸಿಎಂ ಸಿಬಿಐಗೆ ಪತ್ರ ಬರೆದಿದ್ದಾರೆ. ಎಲ್ಲವನ್ನೂ ಆರ್ ಟಿಐ ಅಡಿ ದಾಖಲೆ ತೆಗೆದುಕೊಂಡಿದ್ದೇನೆ ಎಂದರು.
ಡಿವಿಜಿ ಸುದ್ದಿ, ವಾಟ್ಸ್ ಆಪ್: 7483892205



