ಡಿವಿಜಿ ಸುದ್ದಿ, ಉಡುಪಿ: ಸಿ.ಟಿ.ರವಿ, ಪ್ರತಾಪ್ ಸಿಂಹ, ಸುನಿಲ್ ಕುಮಾರ್, ಶೋಭಾ, ಸುರೇಶ್ ಅಂಗಡಿ ಅವರದ್ದು ಒಂದೇ ವರ್ಗ, ಗಲಾಟೆ ಸೃಷ್ಟಿ ಮಾಡಿ ಬೆಂಕಿ ಹಚ್ಚದು ಬಿಜೆಪಿಗರ ಉದ್ದೇಶ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅನ್ನು ಸೊಳ್ಳೆಗೆ ಹೋಲಿಸಿದ ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದರು. ಪ್ರತಾಪ್ ಸಿಂಹ ಎಲ್ಲಿಂದನೂ ಬಂದು ಅಪ್ಪಿತಪ್ಪಿ ಎಂಪಿ ಆಗಿದ್ದಾರೆ
ಅವರ ಭಾಷೆಗಳೇ ಆ ರೀತಿ ಇದೆ. ತೇಜಸ್ವಿ ಸೂರ್ಯ, ಸುರೇಶ್, ಸಿ.ಟಿ ರವಿ ಮೇಲೆ ದೂರು ನೀಡಿದ್ದೇವೆ. ಪ್ರತಾಪ್ ಸಿಂಹ ಸೊಳ್ಳೆ ಹೇಳಿಕೆಗೆ ದೂರು ನೀಡುತ್ತೇವೆ. ಪ್ರಚೋದನೆ ಕೊಡುವವರ ವಿರುದ್ಧ ದೂರು ದಾಖಲಾಗಬೇಕು ಎಂದು ತಿಳಿಸಿದರು.