ಡಿವಿಜಿ ಸುದ್ದಿ, ದಾವಣಗೆರೆ: ಅನರ್ಹ ಶಾಸಕರಿಗೆ ಟಿಕೆಟ್ ನೀಡಲ್ಲ ಅಂತಾ ಹೇಳಿಕೆ ನೀಡಿದ ಡಿಸಿಎಂ ಲಕ್ಷ್ಮಣ್ ಸವದಿ ವಿರುದ್ಧ ಸಿ.ಎಂ.ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಬೆಂಕಿಯಂತೆ ಕಿಡಿಕಾರಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹರಿಗೆ ಟಿಕೆಟ್ ನೀಡಲ್ಲ ಅಂತಾ ಹೇಳಕೆ ನೀಡೋದಕ್ಕೆ ಲಕ್ಷ್ಮಣ್ ಸವದಿ ಯಾರು..? ಅವರೇನೂ ರಾಜ್ಯ ಅಧ್ಯಕ್ಷರಾ…? ಅಥವಾ ರಾಷ್ಟೀಯ ಅಧ್ಯಕ್ಷರಾ..? ಅದನ್ನು ಪಕ್ಷದ ಹೈಕಮಾಂಡ್ , ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧಾರ ಮಾಡ್ತಾರೆ. ರೇಣುಕಾಚಾರ್ಯ, ಸವದಿ ನಿರ್ಧಾರ ಮಾಡದಲ್ಲ. ಪಕ್ಷದಲ್ಲಿ ಒಂದು ಶಿಸ್ತು ಇರುತ್ತೆ. ಅದನ್ನು ಸವದಿ ಉಲ್ಲಂಘನೆ ಮಾಡುತ್ತಿದ್ದಾರೆ.
ಪಕ್ಷದ ಆಂತರಿಕವಾಗಿ ಚರ್ಚೆ ಮಾಡುವ ವಿಷಯವನ್ನು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಪಕ್ಷಕ್ಕೆ ಮುಜುಗರ ತರುತ್ತಿದ್ದಾರೆ. ಈ ನಡವಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಈ ಬಗ್ಗೆ ಹೈಕಮಾಂಡ್ ಗೆ ಪತ್ರ ಬರೆಯುತ್ತೇನೆ ಎಂದರು.