ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಸದಸ್ಯರು ಗೈರು ಹಾಜರಾಗುವ ಮೂಲಕ ಶಾಕ್ ಕೊಟ್ಟಿದ್ದಾರೆ.
ಪಾಲಿಕೆ ಕಾಂಗ್ರೆಸ್ ಸದಸ್ಯರಾದ ಯಶೋದಾ ಉಮೇಶ್, ಜೆ.ಎನ್. ಶ್ರೀನಿವಾಸ ಮತ್ತು ಶ್ವೇತಾ ಎಸ್ ಗೈರು ಹಾಜರಾಗಿದ್ದಾರೆ. ಕಾಂಗ್ರೆಸ್ ಒಟ್ಟು 22 ಪಾಲಿಕೆ ಸದಸ್ಯರಲ್ಲಿ 19 ಸದಸ್ಯರು ಮಾತ್ರ ಹಾಜರಿದ್ದಾರೆ. ಒಟ್ಟು 45 ಪಾಲಿಕೆ ಸದಸ್ಯರಿದ್ದು ಬಿಜೆಪಿ 17, ಕಾಂಗ್ರೆಸ್ 22 , ಪಕ್ಷೇತರ 5 , ಜೆಡಿಎಸ್ 1 ಸ್ಥಾನ ಗೆದ್ದಿದೆ.
ಕಾಂಗ್ರೆಸ್ ನಾಯಕರು ಈ ಮೂವರ ಮನೆಗಳಿಗೆ ಭೇಟಿ ನೀಡಿದ್ದರು. ಆದರೆ, ಶ್ರೀನಿವಾಸ – ಶ್ವೇತಾ ದಂಪತಿ ಹಾಗೂ ಯಶೋದಾ ಮನೆಯಲ್ಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.



