ಡಿವಿಜಿ ಸುದ್ದ, ಹರಪನಹಳ್ಳಿ: ಕಾಂಗ್ರೆಸ್ ಪಕ್ಷ ದೇಶದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದು, ಮುಸ್ಲಿಂ ಸಮುದಾಯ ಎತ್ತಿಕಟ್ಟಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪೌರತ್ವ ವಿರೋಧಿಸುವ ಕ್ರಾಂಗ್ರೆಸ್ ಪಕ್ಷ ರಾಜ್ಯದ ಜನತೆಯ ಕ್ಷಮೆ ಕೇಳಬೇಕು. ಇಲ್ಲ ಅಂದ್ರೆ ಕಾಂಗ್ರೆಸ್ ನಿರ್ಣಾಮವಾಗಿ ಹೋಗುತ್ತದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮುಸ್ಲಿಂ ಸಮುದಾಯದ ಕುತಂತ್ರದ ಮಾತುಗಳನ್ನು ನಂಬುತ್ತಿದೆ. ಮಂಗಳೂರು ಘಟನೆಯನ್ನು ರಾಜಕೀಯ ವಾಗಿ ದುರುಪಯೋಗ ಪಡೆಸಿಕೊಳ್ಳಬಾರದು. ದುರುಪಯೋಗ ಪಡಿಸಿಕೊಂಡರೆ ರಾಜ್ಯದ ಜನತೆ ನಿಮ್ಮನ್ನು ಕ್ಷಮಿಸುವುದಿಲ್ಲ. ಜನತೆಯ ಕ್ಷಮೆ ಕೇಳಿದ್ರೆ ಒಂದೋ ಎರಡೋ ಸೀಟು ಹೆಚ್ಚಾಗಬಹುದು ಎಂದರು.
ಕರ್ನಾಟಕ ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಬಗ್ಗೆ ಸಾಕಷ್ಟು ಚರ್ಚೆ ಆಗ್ತಿವೆ. ಬ್ರಿಟಿಷರು ಭಾರತವನ್ನು ಛಿದ್ರ ಮಾಡಿದ್ದಾಗ ಪಾಕಿಸ್ತಾನದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾದರು. ಸ್ವತಂತ್ರ ಪೂರ್ವದಲ್ಲಿ ಪಾಕಿಸ್ತಾನದಲ್ಲಿ ಶೇ. 19 ಹಿಂದುಗಳು ಇದ್ದರು. ಇದೀಗ ಶೇ. 1.5% ರಷ್ಟು ಮಾತ್ರ ಇದ್ದಾರೆ. ಅದೇ ಭಾರತದಲ್ಲಿ ಸ್ವತಂತ್ರ ಪೂರ್ವದಲ್ಲಿ ಮುಸ್ಲಿಂಮರು ಶೇ. 3 ರಷ್ಟು ಇದ್ದರು. ಈಗ ಶೇ. 20 ರಷ್ಟು ಆಗಿದ್ದಾರೆ. ಪೌರತ್ವ ತಿದ್ದುಪಡಿಯಿಂದ ಭಾರತದ ಮುಸ್ಲಿಮರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಕಾಂಗ್ರೆಸ್ ಮಾತ್ರ ಇದನ್ನು ವಿರೋಧಿಸುತ್ತಿದೆ ಎಂದರು.



