ಡಿವಿಜಿ ಸುದ್ದಿ, ದಾವಣಗೆರೆ: ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗ್ತೀನಿ ಅಂತಾ ತಿರುಕನ ಕನಸು ಕಾಣ್ತಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದರು.
ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಅಹಿಂದ ಸಮಾವೇಶ ಮಾಡಿದವರಿಗೆ ರಾಜ್ಯದಲ್ಲಿ ಭವಿಷ್ಯ ಇಲ್ಲ. ಕರ್ನಾಟಕದಲ್ಲಿ ಜಾತಿ ವಿಚಾರಗಳಿಗೆ ಜನ ಬೆಂಬಲ ಕೊಡುವುದಿಲ್ಲ. ಬೆಂಬಲ ಕೊಡೋದು ರಾಷ್ಟ್ರೀಯ ವಿಚಾರಗಳಿಗೆ ಮಾತ್ರ. ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಕಲ್ಯಾಣ ಕರ್ನಾಟಕದಲ್ಲಿ ಅಹಿಂದ ಸಭೆ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದರು .
ಸಿದ್ದರಾಮಯ್ಯ ಲಿಂಗಾಯತ- ವೀರಶೈವ, ಟಿಪ್ಪು ಜಯಂತಿ ತಂದು ಬೆಂಕಿ ಹಚ್ವುವ ಕೆಲಸ ಮಾಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ಹಿಂದೂಗಳ ಕಗ್ಗೊಲೆಯಾಗಿದೆ. ಜಾತಿ, ಧರ್ಮದ ಹೆಸರಿನಲ್ಲಿ ವಿಭಜನೆ ಮಾಡಿ ಕಾಂಗ್ರೆಸ್ ಕೈ ಸುಟ್ಟುಕೊಂಡಿದ್ದಾರೆ. ಆದರೂ ಬುದ್ದಿ ಬಂದಿಲ್ಲ. ಅಲ್ಪ ಸಂಖ್ಯಾತರನ್ನು, ದಲಿತರನ್ನು ಅಭಿವೃದ್ಧಿ ಮಾಡುವುದಾಗಿ ಹೇಳಿದ್ದಾರೆ. ಅವರೇ ರಚಿಸಿದ ಕಾಂತರಾಜ್ ಸಮಿತಿಯಿಂದ ಜಾತಿಜನಗಣತಿ ಮಾಡಿದ್ದಾರೆ.೧೮೮ ಕೋಟಿ ವೆಚ್ಚ ಮಾಡಿದ್ದಾರೆ. ಆದರೆ ವರದಿಯನ್ನು ಬಿಡಗಡೆ ಮಾಡಿಲ್ಲ. ಹಿಂದುಳಿದ ಆಯೋಗದ ವರದಿ ಬಿಡುಗಡೆ ಅವರಿಗೇ ಆಸಕ್ತಿ ಇಲ್ಲ ಎಂದರು .
ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಶನಿ ಎಂದು ಮಾಜಿ ಸಚಿವರಾದ ಜನಾರ್ದನ ಪೂಜಾರಿ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ ಅವರು ಸಿದ್ದರಾಮಯ್ಯ ಶನಿನೋಹೌದೋ ಅಲ್ವೋ ಎನ್ನುವ ಬಗ್ಗೆ ಜನಾರ್ದನ ಪೂಜಾರಿಯವರನ್ನು ಕೇಳಬೇಕು. ಅನೇಕ ಕಾಂಗ್ರೆಸಿಗರ ಮನಸ್ಸಿನಲ್ಲಿ ಈ ವಿಚಾರ ಇದೀಯೋ ಇಲ್ವೋ ಎನ್ನುವ ಬಗ್ಗೆ ಅವರನ್ನೇ ಕೇಳಿ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ ಎಂದರು.
ಅಹಿಂದವನ್ನು ಕಾಂಗ್ರೆಸ್ ನವರು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿ ಮಾತ್ರ ರಾಷ್ಟ್ರೀಯ ವಿಚಾರಗಳಿಗೆ ಮೊದಲಿನಿಂದ ಬದ್ಧವಾಗಿದೆ. ಆದ್ದರಿಂದ ಬಿಜೆಪಿ ಬೆಳೆಯುತ್ತಿದೆ ಕಾಂಗ್ರೆಸ್ ದಿನೇದಿನ ಕುಗ್ಗುತ್ತಿದೆ.
ಯಡಿಯೂರಪ್ಪ ನವರ ಅಡಿಯೋ ಬಾಂಬ್ ವಿಚಾರ ಕುರಿತು ಮಾತನಾಡಿದ ಅವರು ಯಾವ ಅಡಿಯೋ ಇಲ್ಲ, ಯಾವ್ ಬಾಂಬ್ ಕೂಡ ಇಲ್ಲ ಎಂದು ಕೆಲ ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.