ಡಿವಿಜಿ ಸುದ್ದಿ, ದಾವಣಗೆರೆ: ವಿಪಕ್ಷ ನಾಯಕ ಸಿದ್ದರಾಮಯ್ಯಗೆ ತಲೆ ಕೆಟ್ಟಾಗಲೆಲ್ಲ ಒಂದೊಂದು ಹೇಳಿಕೆ ಕೊಟ್ಟು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಆಕ್ರೋಶ ಹೊರ ಹಾಕಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮಹಾ ಸುಳ್ಳುಗಾರ. ಸುಳ್ಳು ಹೇಳುವುದರಲ್ಲಿ ನೋಬಲ್ ಪ್ರಶಸ್ತಿ ಇದ್ದರೆ ಸಿದ್ಧರಾಮಯ್ಯ ಅವರಿಗೆ ನೀಡಬೇಕು. ಅನಾವಶ್ಯಕವಾಗಿ ಹೇಳಿಕೆ ಕೊಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಬಂದ್ರೆ, ಸಂವಿಧಾನದ ಬದಲಾವಣೆ ಮಾಡುತ್ತೇ ಅಂದ್ರು, ನಾವು ಒಂದು ಅಕ್ಷರವನ್ನು ಬದಲಾವಣೆ ಮಾಡಿಲ್ಲ.
ಇನ್ನು ನೆರೆ ಸಂತ್ರಸ್ತರಿಗೆ ಹತ್ತು ಸಾವಿರ ರೂಪಾಯಿ ಸಂತ್ರಸ್ತರಿಗೆ ಕೊಟ್ಟಿಲ್ಲ ಎಂದ್ರೂ, ಅವರು ರಾಜ್ಯ ಸುತ್ತಿಕೊಂಡು ಬರಲಿ ಎಷ್ಟು ನೆರೆ ಪರಿಹಾರ ಸಿಕ್ಕಿದೆ ಎನ್ನುವುದನ್ನು ಜನರು ಹೇಳ್ತಾರೆ. ಬಿಜೆಪಿ, ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಸಿದ್ಧರಾಮಯ್ಯ ಹೇಳಿಕೆ ಶುದ್ಧ ಸುಳ್ಳು. ಒಳ ಒಪ್ಪಂದ ಬಿಜೆಪಿ ಇತಿಹಾಸದಲ್ಲೇ ಇಲ್ಲ. ಬೆನ್ನಿಗೆ ಚೂರಿ ಹಾಕುವ ಕೆಲಸ ಕಾಂಗ್ರೆಸ್ ಜೆಡಿಎಸ್ ಕೆಲಸ. ಕುಮಾರ ಸ್ವಾಮಿ ಅವರೇ ಬೆಂಬಲ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ನಮಗೆ ಅವರ ಅವಶ್ಯಕತೆ ನನಗೆ ಬೇಕಿಲ್ಲ.



