ಡಿವಿಜಿ ಸುದ್ದಿ, ಚನ್ನಪಟ್ಟಣ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣದಿಂದಲೇ ಸ್ಪರ್ಧಿಸಿ ಮತ್ತೆ ರಾಜ್ಯದ ಸಿಎಂ ಆಗುವ ನಂಬಿಕೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಚನ್ನಪಟ್ಟಣ ಕ್ಷೇತ್ರ ಬದಲಾವಣೆ ಮಾಡುವ ಪ್ರಶ್ನೆ ಇಲ್ಲ. ಚನ್ನಪಟ್ಟಣದ ಜನತೆ ಪ್ರೀತಿಯಿಂದ ಶಾಸಕನನ್ನಾಗಿ ಮಾಡಿದ್ದಾರೆ. ಈ ಕ್ಷೇತ್ರವನ್ನು ಬದಲಾವಣೆ ಪ್ರಶ್ನೆ ಇಲ್ಲ. ರಾಮನಗರ ಮತ್ತು ಚನ್ನಪಟ್ಟಣ ನನ್ನ ಎರಡು ಕಣ್ಣುಗಳು. ರಾಮನಗರ ಚನ್ನಪಟ್ಟಣ ಎರಡು ನನಗೆ ಒಂದೇ ಎಂದರು.
ಚನ್ನಪಟ್ಟಣ ಬಿಟ್ಟು ಮಾಗಡಿಗೆ ಹೋಗುತ್ತೇನೆ ಎಂಬುದು ಸುಳ್ಳು. ಮಾಗಡಿ, ರಾಮನಗರ, ಚನ್ನಪಟ್ಟಣದಲ್ಲಿ ನಮ್ಮ ಪಕ್ಷ ಸದೃಢವಾಗಿದೆ. ಸಮರ್ಥ ಕಾರ್ಯಕರ್ತರಿದ್ದಾರೆ ಎಂದರು.
ನಂಜಾವಧೂತ ಸ್ವಾಮೀಜಿ ಮಾತನಾಡಿ, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಒಳ್ಳೆಯ ಕೆಲಸ ಮಾಡಿದ್ದರು. ಅವರ ಕೆಲಸ ಕಾರ್ಯಗಳು ಸರಿಯಾಗಿ ಪ್ರಚಾರ ವಾಗಲಿಲ್ಲ. ಅವರು ಮತ್ತೊಮ್ಮೆ ಸಿಎಂ ಆಗೋ ದಿನ ಬಂದಿದೆ ಎಂದರು.



