ಡಿವಿಜಿ ಸುದ್ದಿ, ಬೆಂಗಳೂರು: ಅನರ್ಹರ ಪರವಾಗಿ ಮಾತನಾಡಿದ್ದೇನೆ ಎಂಬ ಆಡಿಯೋ ಹರಿ ಬಿಟ್ಟು ವಿಪಕ್ಷಗಳು ಜನರಲ್ಲಿ ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ. ಅನರ್ಹರಿಗೆ ನಾವು ಎಂದಾದ್ರೂ ಟಿಕೆಟ್ ಕೊಡ್ತೀವಿ ಅಂತಾ ಹೇಳಿದ್ವಾ ಅಂತಾ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಪಕ್ಷಗಳಿಗೆ ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪಕ್ಷದ ಸಭೆಯಲ್ಲಿ ಮಾತನಾಡಿದ ಆಡಿಯೋ ವನ್ನು ತಿರುಚಿ ಅನವ್ಯಶ್ಯಕವಾಗಿ ಗೊಂದಲ ಸೃಷ್ಟಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಅನರ್ಹ ಶಾಸಕರು ಮುಂಬೈನಲ್ಲಿ ಹೋಗಿ ಉಳಿದುಕೊಂಡಿದ್ದು, ಇಡೀ ದೇಶಕ್ಕೆ ಗೊತ್ತಿದೆ. ಅನರ್ಹರ ಶಾಸಕರಿಗೂ, ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ಅನರ್ಹರಿಗೆ ರಾಜೀನಾಮೆ ಕೊಡಿ ಅಂತಾ ನಾವು ಎಲ್ಲೂ ಹೇಳಿಲ್ಲ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ನಾನು ದೊಡ್ಡ ನಾಯಕ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಆಡಿಯೋ ತಿರುಚಿ ಸುಳ್ಳು ಪ್ರಚಾರ ಮಾಡುವರಿಗೆ ಉಪ ಚುನಾವಣೆಯಲ್ಲಿ ಜನರ ತಕ್ಕ ಪಾಠ ಕಲಿಸಲಿದ್ದಾರೆ. ಅನರ್ಹ ಶಾಸಕರು ಅಮೀತ್ ಶಾ ಜೊತೆ ಮಾತನಾಡಿದ್ದಾರೆ ಎಂದು ಆರೋಪಿಸಿ, ರಾಜೀನಾಮೆ ಕೇಳುವುದು ಸಿದ್ಧರಾಮಯ್ಯ ಅವರ ಮೂರ್ಖತನ ನಿರ್ಧಾರ. ಸಿದ್ಧರಾಮಯ್ಯ ಅವರ ಇಂತಹ ನಡವಳಿಕೆಯನ್ನು ನಾನು ಖಂಡಿಸುತ್ತೇನೆ ಎಂದರು.



