ಡಿವಿಜಿ ಸುದ್ದಿ, ಬೆಂಗಳೂರು: ಡಿಸಿಎಂ ಹುದ್ದೆ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಪವರ್ ಫುಲ್ ಇರುವಾಗ ಡಿಸಿಎಂ ಹುದ್ದೆ ರದ್ದು ಮಾಡಬೇಕು ಎಂದು ಬಹಿರಂಗ ಹೇಳಿಕೆ ಕೊಟ್ಟಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಡಿಸಿಎಂ ಹುದ್ದೆ ರದ್ದತಿ ಕುರಿತು ಶಾಸಕರಿಂದ ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ ಎಂಬು ಸುದ್ದಿ ಹರಿದಾಡುತ್ತಿತ್ತು. ಈ ಸುದ್ದಿ ತಿಳಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇವತ್ತು ಹೊಸ ವರ್ಷದ ಶುಭಾಶಯ ಕೋರಲು ಬಂದಿದ್ದ ರೇಣುಕಾಚಾರ್ಯನನ್ನು ತರಾಟೆ ತಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯಡಿಯೂರಪ್ಪ ನಿವಾಸ ಧವಳಗಿರಿ ಬೆಳಗ್ಗೆ ಆಗಮಿಸಿದ ರೇಣುಕಾಚಾರ್ಯ, ಮುಖ್ಯಮಂತ್ರಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿದರು. ಇದೇ ವೇಳೆ ಡಿಸಿಎಂ ಹುದ್ದೆಗಳ ಕುರಿತು ಸಹಿ ಸಂಗ್ರಹ ವಿಚಾರವನ್ನೂ ರೇಣುಕಾಚಾರ್ಯ ಎತ್ತಿದರು. ಆಗ ಸಿಎಂ ರೇಣುಕಾಚಾರ್ಯ ಮೇಲೆ ಸಿಡುಕಿದರು. ಡಿಸಿಎಂ ಹುದ್ದೆ ಕುರಿತು ಬಹಿರಂಗ ಹೇಳಿಕೆ ಕೊಡದಂತೆ ತಾಕೀತು ಮಾಡಿದ್ರು ಎನ್ನಲಾಗುತ್ತಿದೆ.
ಡಿಸಿಎಂ ಹುದ್ದೆ ಬಗ್ಗೆ ನಿರ್ಧಾರ ಕೈಗೊಳ್ಳಲು ಹೈಕಮಾಂಡ್ ಇದೆ. ನೀನು ಯಾಕೆ ಬಹಿರಂಗ ಹೇಳಿಕೆ ಕೊಡ್ತಿಯಾ..? ಈ ಕುರಿತು ಸಹಿ ಬೇರೆ ಸಂಗ್ರಹ ಮಾಡುತ್ತಿದ್ದೀಯಾ ಅಂತಾ ಮಾಧ್ಯಮಗಳಲ್ಲಿ ವರದಿ ಬಂದಿದೆ. ನಿನಗೆ ಯಾಕೆ ಬೇಕು ಸುಮ್ಮನಿರು ಎಂದು ತರಾಟೆ ತಗೆದುಕೊಂಡಿದ್ದಾರೆ.



