ಡಿವಿಜಿ ಸುದ್ದಿ, ಮಂಡ್ಯ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಂಡ್ಯದ ಗಂಡು. ಅವರು ಕೊಟ್ಟ ಮಾತಿಗೆ ತಪ್ಪಲ್ಲ. ಜೆಡಿಎಸ್ , ಕಾಂಗ್ರೆಸ್ ನಿಂದ ಹೋದ ಎಲ್ಲಾ 17 ಜನರನ್ನು ಮಂತ್ರಿ ಮಾಡೇ ಮಾಡುತ್ತಾರೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ವ್ಯಂಗ್ಯವಾಡಿದ್ರು,
ಈ ಬಗ್ಗೆ ಮಂಡ್ಯದಲ್ಲಿ ಮಾಧ್ಯಮ ಜೊತೆ ಮಾತನಾಡಿದ ಪುಟ್ಟರಾಜು, ಬಿಜೆಪಿಯಲ್ಲಿ ಗೆದ್ದವರಿಗೆ ಮಾತ್ರ ಮಂತ್ರಿ ಸ್ಥಾನ, ಸೋತವರಿಗೆ ಇಲ್ಲ ಎನ್ನುವುದಕ್ಕೆ ಪ್ರತಿಕ್ರಿಯೆ ನೀಡಿ, ಯಡಿಯೂರಪ್ಪ ಜೆಡಿಎಸ್ ಪಕ್ಷ ಅಧಿಕಾರ ಕೊಡದೇ ಮಾತಿಗೆ ತಪ್ಪಿದ್ದೆ ಎಂದು ಪದೇ ಪದೇ ಹೇಳುತ್ತಿದ್ದರು. ಈಗ ಯಡಿಯೂರಪ್ಪಮಾತು ತಪ್ಪಲ್ಲ ಎಂದು ಪರೋಕ್ಷವಾಗಿ ಕುಟುಕಿದರು.
ಯಡಿಯೂರಪ್ಪ ಮಂಡ್ಯದ ಗಂಡು ಎಂದಿಗೂ ಮಾತಿಗೆ ತಪ್ಪಲ್ಲ. ಎಲ್ಲಾ 17 ಜನರಿಗೂ ಸಚಿವ ಸ್ಥಾನ ನೀಡುತ್ತಾರೆ ಎಂದರು.



