ಡಿವಿಜಿ ಸುದ್ದಿ , ಮೈಸೂರು: ಎಚ್.ಡಿ. ಕುಮಾರಸ್ವಾಮಿ ಓರ್ವ ಅಪಕ್ವ ರಾಜಕಾರಣಿ. ಅನುಭವ ಇಲ್ಲದೆ ಮುಖ್ಯಮಂತ್ರಿಯಾದ್ರೆ ಹೀಗೆ ಮಾತನಾಡೋದು ಎಂದು ಮಾಜಿ ಸಚಿವ ಎ . ಮಂಜು ಟೀಕಿಸಿದರು.
ಮೈಸೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿರೋಧ ಮಾಡುವ ಸಲುವಾಗಿ ಪೌರತ್ವ ಕಾಯ್ದೆ ವಿರೋಧಿಸುತ್ತಿದ್ದಾರೆ. ಕಾಯ್ದೆ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟ ಮೇಲೆ ಚರ್ಚೆ ಮಾಡಲಿ. ಅದಕ್ಕೂ ಮುಂಚೆ ಯಾಕೆ ಪ್ರತಿಭಟನೆ ಮಾಡಬೇಕು ಎಂದು ಪ್ರಶ್ನಿಸಿದರು.
ಭಾರತದ ಕಾನೂನಿಗೆ ಗೌರವ ಕೊಡದ ಮೇಲೆ ಅವರೆಲ್ಲ ಯಾಕೆ ಭಾರತದಲ್ಲಿ ಇರಬೇಕು. ಎಲ್ಲಿಯತನಕ ನಾವು ಭಾರತದ ಕಾನೂನನ್ನು ಗೌರವಿಸುದಿಲ್ಲವೋ ಅಲ್ಲಿಯವರೆಗೆ ನಾವು ಭಾರತೀಯರು ಅನ್ನೋದಕ್ಕೆ ಅನ್‍ಫಿಟ್. ಮಂಗಳೂರು ಗಲಭೆ ಪೂರ್ವ ನಿಯೋಜಿತ ಘಟನೆ. ಇದರ ನೈತಿಕ ಹೊಣೆಯನ್ನ ವಿರೋಧ ಪಕ್ಷಗಳೇ ಹೊರಬೇಕು ಎಂದು ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.
ವಿರೋಧ ಪಕ್ಷದವರು ಜನರನ್ನ ಪ್ರಚೋದನೆ ಮಾಡಿ ಗಲಭೆಗೆ ಕಾರಣರಾಗಿದ್ದಾರೆ. ರಮೇಶ್ ಕುಮಾರ್‍ರಿಂದ ಇದನ್ನ ನಾನು ನೀರಿಕ್ಷೆ ಮಾಡಿರಲಿಲ್ಲ. ವಿರೋಧ ಪಕ್ಷಗಳು ಎಲ್ಲವನ್ನು ವಿರೋಧ ಮಾಡ್ತಿದ್ದಾರೆ. ಪೊಲೀಸರು ಮೊದಲು ಗುಂಡು ಹೊಡೆದಿಲ್ಲ. ಅವರಿಗೆ ಕಲ್ಲು ಬಿದ್ದ ಮೇಲೆಯೇ ಗುಂಡು ಹೊಡೆದಿದ್ದಾರೆ ಎಂದರು.
.



