ಡಿವಿಜಿ ಸುದ್ದಿ, ಹೊಸಪೇಟೆ: ಮಂತ್ರಿ ಆಗದು ನನ್ನ ಉದ್ದೇಶವಾಗಿರಲಿಲ್ಲ. ವಿಜಯನಗರ ಜಿಲ್ಲೆ ಮಾಡೋದೆ ನನ್ನ ಗುರಿಯಾಗಿದೆ ಎಂದು ಸಚಿವ ಆನಂದ್ ಸಿಂಗ್ ಹೇಳಿದರು.
ನೂತನ ಸಚಿವರಾದ ನಂತರ ಸ್ವಕ್ಷೇತ್ರಕ್ಕೆ ಮರಳಿದ ಅವರು, ಭಟ್ರಹಳ್ಳಿ ಆಂಜನೇಯ ಸ್ವಾಮಿ ಕಳಸ ಹಾಗೂ ಹಾಗೂ ನವಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ವಿಜಯನಗರ ಜಿಲ್ಲೆಯಾದರೆ ಮಾತ್ರ ನನ್ನ ಬೇಡಿಕೆ ಈಡೇರಿದಂತೆ. ವಿಜಯನಗರ ಸಾಮ್ರಾಜ್ಯದ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು. ಪಂಪಾ ವಿರೂಪಾಕ್ಷೇಶ್ವರ ಆಶೀರ್ವಾದ ನಮ್ಮೆಲ್ಲರ ಮೇಲೆ ಇದೆ ಎಂದರು.
ನನಗೆ ಜಿಲ್ಲೆಯ ಉಸ್ತುವಾರಿ ವಹಿಸಿದರೆ ಒಪ್ಪಿಕೊಳ್ಳುವೆ. ಆದರೆ, ಅದಕ್ಕೂ ಮುನ್ನ ಶ್ರೀರಾಮುಲು ಅವರಿಗೆ ಆದ್ಯತೆ ಕೊಡುವಂತೆ ತಿಳಿಸುತ್ತೇನೆ. ಈ ವಿಚಾರದಲ್ಲಿ ಶ್ರೀರಾಮುಲು ಅವರ ಅಭಿಪ್ರಾಯ ಪಡೆದು ಮುಂದುವರೆಯುತ್ತೇನೆ. ಯಾವ ಖಾತೆ ಕೊಡಬೇಕು ಎನ್ನುವುದು ಅವರಿಗೆ ಮುಖ್ಯಮಂತ್ರಿಗಳಿಗೆ ಬಿಟ್ಟದ್ದು. ಇದೇ ಖಾತೆ ಬೇಕೆಂದು ಬೇಡಿಕೆ ಇಟ್ಟಿಲ್ಲ ಎಂದು ತಿಳಿಸಿದರು.