ಡಿವಿಜಿ ಸುದ್ದಿ, ಬೆಂಗಳೂರು: ರಾಗಿಣಿ ಅವರನ್ನು ಚುನಾವಣೆಪ್ರಚಾರಕ್ಕೆ ನಟಿ ಎಂದು ಕರೆದಿದ್ದೇವೆ. ಆದರೆ, ಡ್ರಗ್ ಹುಡುಗಿ ಅಂತಾ ಪ್ರಚಾರಕ್ಕೆ ಕರೆದಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟಿ ರಾಗಿಣಿ ಅವರು ಎಲ್ಲಾ ರಾಜಕೀಯ ನಾಯಕರ ಜೊತೆಗೂ ಫೋಟೋ ತೆಗೆಸಿಕೊಂಡಿದ್ದಾರೆ. ಕೆ.ಡಿ. ಶಿವಕುಮಾರ್ ಜೊತೆ ಸೇರಿದಂತೆ ನನ್ನ ಜೊತೆಯೂ ಫೋಟೋ ತೆಗೆಸಿಕೊಂಡಿರಬಹುದು ಎಂದರು.
ಆರ್. ಶಂಕರ್, ಎಂಟಿಬಿ ನಾಗರಾಜ್, ವಿಶ್ವನಾಥ್ ಅವರು ಸಚಿವ ಸ್ಥಾನಕ್ಕೆ ಇನ್ನು ಸ್ವಲ್ಪ ದಿನ ಕಾಯಬೇಕು. ನಾವು ಕೂಡ 14 ತಿಂಗಳು ಕಾಯ್ದಿದ್ದೇವೆ ಎಂದರು.



