Connect with us

Dvgsuddi Kannada | online news portal | Kannada news online

ಸಮೃದ್ಧ ಭಾರತ ಎಲ್ಲರ ಆಕಾಂಕ್ಷೆ: ಪ್ರಧಾನಿ ನರೇಂದ್ರ ಮೋದಿ

ಪ್ರಮುಖ ಸುದ್ದಿ

ಸಮೃದ್ಧ ಭಾರತ ಎಲ್ಲರ ಆಕಾಂಕ್ಷೆ: ಪ್ರಧಾನಿ ನರೇಂದ್ರ ಮೋದಿ

 ಡಿವಿಜಿ ಸುದ್ದಿ, ತುಮಕೂರು:  ಬಲವಾದ ಅಡಿಪಾಯದೊಂದಿಗೆ 21 ನೇ ಶತಮಾನ ಆರಂಭವಾಗಿದೆ. ನಮ್ಮಲ್ಲಿ ಹೊಸ ಆಕಾಂಕ್ಷೆ ಮೂಡಿದೆ. ಭಾರತವನ್ನು ಸಮೃದ್ಧ, ಸಕ್ಷಮ, ಸರ್ವ ಹಿತಕಾರಿ ವಿಶ್ವ ಶಕ್ತಿಯಾಗಿಸಬೇಕು ಎನ್ನುವ ಆಕಾಂಕ್ಷೆ ಹೊಂದಿದ್ದೇವೆ.  ದೇಶದ ಮಹಿಳೆಯರು, ಮಕ್ಕಳು, ದಲಿತರು ಸೇರಿದಂತೆ ಎಲ್ಲರ ಆಕಾಂಕ್ಷೆ ಕೂಡ ಅದೇ ಆಗಿದ್ದು, ಸಮೃದ್ಧ ಭಾರತ ಕಟ್ಟಲು ಎಲ್ಲರು ಒಂದಾಗಬೇಕಿದೆ  ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ತುಮಕೂರಿನ ಸಿದ್ದಗಂಗಾ ಮಠದ  ಶ್ರೀ ಶಿವಕುಮಾರ ಶ್ರೀಗಳ ವಸ್ತು ಸಂಗ್ರಹಾಲಯದ ಶಿಲಾನ್ಯಾಸ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ಸಿದ್ದಗಂಗಾ ಶ್ರೀಗಳ ಗದ್ದುಗೆಗೆ ನಮನ ಸಲ್ಲಿಸಿದರು. ಹಣೆಗೆ ವಿಭೂತಿ ಹಚ್ಚಿ, ಕೊರಳಿಗೆ ರುದ್ರಾಕ್ಷಿ ಮಾಲೆ ಹಾಕಿ ಮೋದಿ ಅವರನ್ನು ಸಿದ್ದಲಿಂಗ ಶ್ರೀಗಳು ಬರಮಾಡಿಕೊಂಡರು. ನಂತರ ಮಠದ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿಗಳು, ಕನ್ನಡದಲ್ಲಿಯೇ ಮಾತು ಆರಂಭಿಸಿದರು.

ಹೊಸ ವರ್ಷದಲ್ಲಿ ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದು ಖುಷಿ ತಂದಿದೆ. ಆದರೆ ಶಿವಕುಮಾರ ಸ್ವಾಮೀಜಿಗಳು ಭೌತಿಕವಾಗಿ ಇಲ್ಲದಿರುವುದು ನಮ್ಮನ್ನು ಕಾಡುತ್ತಿದೆ. ನಮಗೆ ಪ್ರೇರಣಾ ಶಕ್ತಿ ಆಗಿರುವ ಸಿದ್ದಗಂಗಾ ಶ್ರೀಗಳ ವಸ್ತು ಸಂಗ್ರಹಾಲಯದ ಶಿಲಾನ್ಯಾಸ ಉದ್ಘಾಟನೆಗೆ ಆಗಮಿಸಿದ್ದು ನನ್ನ ಪುಣ್ಯ. ಶ್ರೀ ಶಿವಕುಮಾರ ಸ್ವಾಮೀಜಿಗಳ ಚರಣ ಕಮಲಗಳಿಗೆ ನಾನು ನಮಿಸುತ್ತೇನೆ. ಕೆಲವು ದಿನಗಳ ಹಿಂದೆಯಷ್ಟೇ ಉಡುಪಿಯ ಪೇಜಾವರ ಶ್ರೀಗಳು ನಮ್ಮಿಂದ ಭೌತಿಕವಾಗಿ ದೂರವಾಗಿದ್ದಾರೆ.

ಇಂತಹ ಮಹಾನ್ ಸಂತರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಚಲಿಸಬೇಕು. ದೇಶವನ್ನು ಸಮೃದ್ಧ, ಸಕ್ಷಮ, ಸಶಕ್ತವನ್ನಾಗಿ ಮಾಡುವ ಆಕಾಂಕ್ಷೆ ಎಲ್ಲ ಜನರದ್ದಾಗಿದೆ. ಹಾಗಾಗಿ ದೇಶವನ್ನು ಸದೃಢವಾಗಿ ಕಟ್ಟಲು ಎಲ್ಲರೂ ಒಂದಾಗಬೇಕಿದೆ. 2014ರ ಬಳಿಕ ಸಾಮಾನ್ಯ ಜನರ ಬದಲಾವಣೆ ತರಲು ಸರ್ಕಾರ ಸನ್ನದ್ಧವಾಗಿದೆ ಎಂದು ತಿಳಿಸಿದರು.

 ಜವಾಬ್ದಾರಿ ಸಹಿತವಾಗಿ ಕರ್ತವ್ಯಕ್ಕೆ ಗೌರವ ನೀಡುವ ಸಂಸ್ಕಂತಿ ಬಗ್ಗೆ ಜಾಗೃತಿ ಮೂಡಿಸುತ್ತಿರಬೇಕು. ಪ್ರಕೃತಿಯ ರಕ್ಷಣೆ ( ಪ್ಲಾಸ್ಟಿಕ್ ಬಳಕೆ) ಮತ್ತು ಜಲ ಸಂರಕ್ಷಣೆ ಮಾಡಲು ಜಾಗೃತಿ ಮೂಡಿಸಬೇಕೆಂದು ಮನವಿ ಮಾಡಿದರು.

ನಮ್ಮ ಸರ್ಕಾರ ಪಾರದರ್ಶಕವಾಗಿ ಹಗಲು-ರಾತ್ರಿ ಎನ್ನದೇ ಕೆಲಸ ಮಾಡಿಕೊಂಡು ಬಂದಿದೆ. ಆರೋಗ್ಯ ವಿಮೆ, ಗ್ಯಾಸ್ ಸಂಪರ್ಕ, ಮನೆ, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸೋದು ನಮ್ಮ ಸರ್ಕಾರದ ಕೆಲಸವಾಗಿದೆ. ಮಹಾತ್ಮ ಗಾಂಧೀಜೀಯವರ 150ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಬಯಲು ಮುಕ್ತ ಶೌಚಾಲಯದತ್ತ ದಿಟ್ಟ ಹೆಜ್ಜೆ ಇಡಬೇಕಿದೆ ಎಂದು ಕರೆ ನೀಡಿದರು

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top