ಇದು ಜಗತ್ತಿಗೆ ಕಷ್ಟಕಾಲ.ನನ್ನ ಸುತ್ತ ಇರುವ ಸಾವಿರಾರು ಮನಸುಗಳಲ್ಲಿ ದುಃಖ ತುಂಬಿದೆ. ಇಂಥ ದುಃಖದ ಪರಿಸ್ಥಿತಿಯಲ್ಲಿ ನಾನೊಬ್ಬ ಖುಷಿಯಾಗಿದ್ದರೆ ಆದೀತೆ? ನನ್ನ ಜನ, ನನ್ನ ಪ್ರೀತಿಪಾತ್ರರು ಹೊಟ್ಟೆಗಿಲ್ಲದೆ ಹಸಿದು ಮಲಗಿರುವಾಗ ನಾನಾದರೂ ಹೇಗೆ ಹುಟ್ಟಿದ ಹಬ್ಬ ಆಚರಿಸಿಕೊಳ್ಳಲಿ?
ಮನಸ್ಸು ಒಪ್ಪಲಿಲ್ಲ….
‘ಹೋಗು ನಿನ್ನವರಿಗೆ ಆತ್ಮಸ್ಥೈರ್ಯ ಕೊಡು. ಅವರ ಹಸಿವು ನೀಗಿಸು. ಆತ್ಮಸ್ಥೈರ್ಯ ತುಂಬು’ ಅಂತ ಮನಸು ಆದೇಶಿಸಿತು. ನಾನು ನನ್ನ ಮನಸ್ಸಿನ ಆದೇಶವನ್ನು ಎಂದೂ ಧಿಕ್ಕರಿಸುವುದಿಲ್ಲ. ಶಿರಸಾವಹಿಸಿ ಪಾಲಿಸುತ್ತೇನೆ. ದಾರಿತಪ್ಪಿಸುವವರ ಮಾತಿಗಿಂತ ಮನಸಿನ ಮಾತು ಹಿತ ಮತ್ತು ಮುಖ್ಯ.
ರಾಣೆಬೆನ್ನೂರಿನ ಸುಮಾರು ಮುನ್ನೂರು ನೇಕಾರರ ಕುಟುಂಬಗಳಿಗೆ ಬೇಳೆ, ಎಣ್ಣೆ, ಸೋಪು, ಅಕ್ಕಿ, ಹಿಟ್ಟು, ಸಕ್ಕರೆ, ಚಹಾ ಪುಡಿ ಸೇರಿದಂತೆ ಎಲ್ಲವನ್ನೂ ಪ್ರೀತಿಯಿಂದ ನೀಡಿದೆ.
ಅವರ ಕಣ್ಣಲ್ಲಿ ಆನಂದ ಭಾಷ್ಪವಿತ್ತು
ಆ ಆನಂದ ಭಗವಂತನ ಕೊಡುಗೆ
ಈ ಸಲದ ಹುಟ್ಟುಹಬ್ಬಕ್ಕೆ ನನಗೆ ಇಷ್ಟು ಪ್ರೀತಿ ಸಾಕು..!
ಪೂಜ್ಯ ಶ್ರೀ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳವರಿಗೆ, ಶಾಸಕ ಅರುಣ ಪೂಜಾರರವರಿಗೆ, ಚಂದ್ರಶೇಖರ ಪೂಜಾರ, ಕರಿಬಸಪ್ಪ ಹಾಗೂ ಸಕಲ ಸದ್ಭಕ್ತರಿಗೆ ಅನಂತ ಧನ್ಯವಾದವುಗಳು.
-ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು
ಪಂಚಮಸಾಲಿ ಜಗದ್ಗುರು ಪೀಠ,ಹರಿಹರ.