Connect with us

Dvgsuddi Kannada | online news portal | Kannada news online

ಲಿಂಗಾಯತ ಒಳಪಂಗಡ ಒಂದಾಗಲಿ: ವಚನಾನಂದ ಸ್ವಾಮೀಜಿ

ಹರಪನಹಳ್ಳಿ

ಲಿಂಗಾಯತ ಒಳಪಂಗಡ ಒಂದಾಗಲಿ: ವಚನಾನಂದ ಸ್ವಾಮೀಜಿ

ಡಿವಿಜಿ ಸುದ್ದಿ, ಹರಪನಹಳ್ಳಿ: ವೀರಶೈವ, ಲಿಂಗಾಯತ ಎರಡು ವಿಷಯದ ಬಗ್ಗೆ ನಮಗೆ ಆಸಕ್ತಿ ಇಲ್ಲ. ನಾವು ಎರಡು ವಿಚಾರಧಾರೆಗಳನ್ನು ಗೌರವಿಸುತ್ತೇವೆ. ಲಿಂಗಾಯತ ಎಲ್ಲಾ  ಒಳಪಂಗಡಗಳು ಒಂದಾಗಬೇಕೆಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.

ಹರಿಹರದ ಪಂಚಮಸಾಲಿ ಪೀಠದಲ್ಲಿ ಹರಜಾತ್ರೆ ಮತ್ತು ಬೆಳ್ಳಿ ಬೆಡಗು ಕಾರ್ಯಕ್ರಮ ನಡೆಯುವ ಹಿನ್ನೆಲೆ ಪಟ್ಟಣದ ಎಡಿಬಿ ಕಾಲೇಜು ಆವರಣದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.

ಇದನ್ನಓದಿ : ಹರ ಜಾತ್ರಾ ಮಹೋತ್ಸವ, ಬೆಳ್ಳಿ ಬೆಡಗು ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಗೆ ಆಹ್ವಾನ

ವೀರಶೈವ ಮತ್ತು ಲಿಂಗಾಯಿತ ಎರಡರ ಬಗ್ಗೆಯೂ ಆಸಕ್ತಿ ಇಲ್ಲ. ನಮ್ಮದು ಪಂಚಮಸಾಲಿ ಜಗದ್ಗುರು ಪೀಠ. ವೀರಶೈವ ಮತ್ತು ಲಿಂಗಾಯಿತ ಎರಡು ವಿಚಾರಧಾರೆಗೆ ಹಾಗೂ ಎರಡು ಒಂದೇ ಎನ್ನುವವರಿಗೂ ಗೌರವ ಕೊಡುತ್ತೇವೆ. ಈ ವಿಷಯದಲ್ಲಿ ನಮ್ಮನ್ನು ಮಧ್ಯೆ ಎಳೆದು ತರಬೇಡಿ, ನಾವು ಆ ವಿಷಯಕ್ಕೆ ಬರುವುದಿಲ್ಲ. ಮತ್ತೊಬ್ಬರನ್ನು ಒತ್ತಾಯ ಮಾಡಿ ಅದು ಸರಿ, ಇದು ಸರಿ ಎಂದು ಹೇಳಲು ಬರಬೇಡಿ, ಸಾಧು ಸಮಾಜ ಸೇರಿದಂತೆ ಲಿಂಗಾಯಿತದ ಯಾವುದೇ ಒಳಪಂಗಡಗಳಿರಬಹುದು, ಎಲ್ಲರೂ ಒಂದು ಎನ್ನುವ ತಾತಾವರಣ ಸೃಷ್ಠಿ ಆಗಬೇಕು. ಆ ವಾತಾರಣವನ್ನು ಸೃಷ್ಠಿಸುವ ಕನಸು ನಮ್ಮದಾಗಿದೆ ಎಂದರು

ದಾಸೋಹಕ್ಕೆ ಧವಸ ಧಾನ್ಯ  ತನ್ನಿ

ಶ್ರೀ ಪೀಠದಿಂದ ಇದೇ ಮೊದಲ ಬಾರಿ ಬೆಳ್ಳಿ ಬೆಡಗು ಕಾರ್ಯಕ್ರಮ ಆರಂಭಿಸಲಾಗಿದೆ. ಅ.8ರಂದು ಕಾರ್ಯಕ್ರಮಕ್ಕೆ ಯಲಬುರ್ಗದಲ್ಲಿ ಚಾಲನೆ ನೀಡಲಾಗಿದೆ. ಜ.14-15ರಂದು ಹರಜಾತ್ರೆ ಮತ್ತು ಬೆಳ್ಳಿ ಬೆಡಗು ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಪ್ರತಿಯೊಬ್ಬರೂ ಮಠಕ್ಕೆ ಬರುವಾಗ ಹಾರ-ತುರಾಯಿ ಬದಲು ದಾಸೋಹಕ್ಕೆ ಧವಸ ಧಾನ್ಯ ತನ್ನಿ ಎಂದರು.

ಡಿ.15ರಿಂದ 25ವರೆಗೆ 10 ದಿನಗಳ ಕಾಲ ಹರಪನಹಳ್ಳಿ ತಾಲೂಕಿನಲ್ಲಿ ಪ್ರವಾಸ ಮಾಡಲಿದ್ದು, ಪ್ರತಿ ಗ್ರಾಮದಲ್ಲಿ 60 ನಿಮಿಷ ಮಾತ್ರ ಇರುತ್ತೇವೆ. ಸ್ವಾಗತಿಸಲು ಮೆರವಣಿಗೆ ಮಾಡುವಂತಿಲ್ಲ. ಹತ್ತು ನಿಮಿಷ ಕಾಲ ಪಾದಯಾತ್ರೆ ನಡೆಯಬೇಕು. ಗ್ರಾಮದಲ್ಲಿ ಸರಳ ವೇದಿಕೆ ಮಾಡಬೇಕು. ಹಾರ ತುರಾಯಿ ಹಾಕುವಂತಿಲ್ಲ ಎಂದ ತಿಳಿಸಿದರು.

ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಸೇರಿಸಲು ನಿರ್ಧರಿಸಲಾಗಿದೆ. ಗ್ರಾಮ ದರ್ಶನ ಮೂಲಕ ಭಕ್ತರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದ್ದು, ಈಗಾಗಲೇ ರಾಣೆಬೆನ್ನೂರಿನ 20 ಹಳ್ಳಿಗಳಲ್ಲಿ ದಿನಕ್ಕೆ 5 ಹಳ್ಳಿಗಳಂತೆ ಗ್ರಾಮ ದರ್ಶನ ಮಾಡಲಾಗಿದೆ. ಸಹಜವಾಗಿ ಭಕ್ತರು ಮಠಕ್ಕೆ ಬರುತ್ತಾರೆ. ಆದರೆ ಮಠಕ್ಕೆ ಭಕ್ತರನ್ನು ಆಹ್ವಾನಿಸಲು ಗುರುಗಳು ಗ್ರಾಮಕ್ಕೆ ಬರುತ್ತಿದ್ದೇವೆ ಎಂದರು.

ಜಾತ್ರೋತ್ಸವ ಉಸ್ತುವಾರಿ ಸಿ.ಆರ್.ಬಳ್ಳಾರಿ ಮಾತನಾಡಿ, ಜ.14ರಂದು 2000 ಬೈಕ್ ರ್‍ಯಾಲಿ ಮೂಲಕ ಕಾರ್ಯಕ್ರಮ ಚಾಲನೆಗೊಳ್ಳಲಿದೆ. ಯುವ ಘಟಕ ಮೇಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಒಂದು ಸಾವಿರ ಮಹಿಳೆಯರ ಕುಂಬ ಮೇಳ ಸ್ವಾಗತವಿದೆ. ಮಹಿಳೆಯರು, ಯುವಕರು ಹೆಚ್ಚಿನ ಸೆಂಖ್ಯೆಯಲ್ಲಿ ಭಾಗವಹಿಸಬೇಕು. ನಾವೆಲ್ಲರೂ ಸ್ವಾಮೀಜಿಗಳಿಗೆ ಶಕ್ತಿ ತುಂಬಬೇಕು ಎಂದು ತಿಳಿಸಿದರು.

ಸಮಾಜದ ತಾಲೂಕು ಅಧ್ಯಕ್ಷ ಪಾಟೀಲ್ ಬೆಟ್ಟನಗೌಡ ಮಾತನಾಡಿ, ಹರ ಜಾತ್ರೆ, ಬೆಳ್ಳೆಬೆಡಗು ಕಾರ್ಯಕ್ರಮ ಅಂಗವಾಗಿ ಎಲ್ಲಾರೂ ತನುಮನ ಧನದಿಂದ ಸಹಕರಿಸಬೇಕು ಎಂದು ವಿನಂತಿಸಿಕೊಂಡರು. ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷ ಎಂ.ರಾಜಶೇಖರ, ಜಿ.ಪಂ ಸದಸ್ಯ ಉತ್ತಂಗಿ ಮಂಜುನಾಥ್, ಎಂ.ಟಿ.ಬಸವನಗೌಡ, ಗುರುಬಸವಗೌಡ, ಶಶಿಧರ ಪೂಜಾರ್ ಮಾತನಾಡಿದರು.

ಮುಖಂಡರಾದ ಎನ್.ಕೊಟ್ರೇಶ್, ನವೀನ್ ಪಾಟೀಲ್, ಅರಸನಾಳು ರುದ್ರಪ್ಪ, ತಲವಾಗಲು ಜಿ.ಕೆ.ಮಲ್ಲಿಕಾರ್ಜುನ, ನಾಗರಾಜ್, ಬಾವಿಹಳ್ಳಿ ಬಸವರಾಜ್, ವಿರುಪಾಕ್ಷಪ್ಪ, ಆರುಂಡಿ ನಾಗರಾಜ್, ಮತ್ತಿಹಳ್ಳಿ ಅಜ್ಜಣ್ಣ, ಚಂದ್ರೇಗೌಡ, ಕೆ.ಉಚ್ಚೆಂಗೆಪ್ಪ ಇತರರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಹರಪನಹಳ್ಳಿ

ದಾವಣಗೆರೆ

Advertisement
Advertisement Enter ad code here

Title

To Top