ಡಿವಿಜಿ ಸುದ್ದಿ, ಮೈಸೂರು: ದ್ವಿತೀಯ ಪಿಯುಸಿವರೆಗೂ ಆನ್ ಲೈನ್ ಶಿಕ್ಷಣ ರದ್ದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮೊದಲಿನಿಂದಲೂ ಆನ್ ಲೈನ್ ಶಿಕ್ಷಣ ಪದ್ಧತಿಗೆ ವಿರೋಧ ಮಾಡುತ್ತಿದ್ದೇನೆ. ಇದೀಗ ಸರ್ಕಾರ 5ನೇ ತರಗತಿವರೆಗೆ ಆನ್ ಲೈನ್ ಶಿಕ್ಷಣ ರದ್ದು ಮಾಡಿದೆ. ಆದರೆ, ಪಿಯುಸಿವರೆಗೂ ಆನ್ ಲೈನ್ ಶಿಕ್ಷಣ ರದ್ದು ಮಾಡಲಿ ಎಂದರು.
ಮಕ್ಕಳಿಗೆ ನೇರವಾಗಿ ತರಗತಿಯಲ್ಲಿಯೇ ಕಲಿಯಬೇಕು. ಹೀಗಾಗಿ ಅಕ್ಟೋಬರ್‍ವರೆಗೆ ಶಾಲೆ ತೆರೆಯಬಾರದು. ಖಾಸಗಿ ಶಾಲೆಗಳ ಶುಲ್ಕ ಕಡಿಮೆ ಮಾಡುವ ವಿಚಾರವನ್ನು ಸರ್ಕಾರ ಕೂಡಲೇ ತೀರ್ಮಾನ ಕೈಗೊಳ್ಳಬೇಕು ಎಂದರು.



