ಡಿವಿಜಿ ಸುದ್ದಿ, ಹುಬ್ಬಳ್ಳಿ: ದೇಶದಾದ್ಯಂತ ಮತ್ತೆ ಲಾಕ್‌ಡೌನ್ ಮಾಡಬೇಕಾದ ಮಾಡುವುದಿಲ್ಲ. ಇರುವಂತಹ ಆರೋಗ್ಯ ವ್ಯವಸ್ಥೆಯನ್ನು ಉತ್ತಮಗೊಳಸಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ದೇಶದಲ್ಲಿ ಕೊರೊನಾ ನಿಯಂತ್ರಣದಲ್ಲಿದ್ದು, ಬೇರೆ ದೇಶಗಳಿಗಿಂತ ನಮ್ಮ ದೇಶದಲ್ಲಿ ಮರಣ ಪ್ರಮಾಣ ಕಡಿಮೆ ಇದೆ. ಜನರ ಜಾಗೃತಿ ಅತಿ ಮುಖ್ಯ . ಪ್ರಧಾನಿಯ ಮಾರ್ಗದರ್ಶನದಲ್ಲಿ ಕೊರೊನಾ ಎದುರಿಸಲು ಸಿದ್ಧವಾಗಿದ್ದೇವೆ ಎಂದರು.
ಚೀನಾಕ್ಕೆ ತಕ್ಕ ಉತ್ತರ ಕೊಡಲು ರಕ್ಷಣಾ ಪಡೆ ಸಿದ್ಧವಾಗಿದೆ. ನಮ್ಮಲ್ಲಿ ತಕ್ಕನಾದ ನಾಯಕತ್ವ ಹೊಂದಿದ್ದೇವೆ. ಚೀನಾಗೆ ಒಂದಿಂಚು ಭೂಮಿಯನ್ನು ಬಿಟ್ಟುಕೊಟ್ಟಿಲಿಲ್ಲ ಎಂದು ಹೇಳಿದರು.



