Connect with us

Dvgsuddi Kannada | online news portal | Kannada news online

ಆ. 5ರಿಂದ ಜಿಮ್, ಯೋಗ, ರಾತ್ರಿ ಸಂಚಾರ ಮುಕ್ತ; ಆ. 31ರಿಂದ‌ ಶಾಲಾ, ಕಾಲೇಜ್ ಓಪನ್

ರಾಷ್ಟ್ರ ಸುದ್ದಿ

ಆ. 5ರಿಂದ ಜಿಮ್, ಯೋಗ, ರಾತ್ರಿ ಸಂಚಾರ ಮುಕ್ತ; ಆ. 31ರಿಂದ‌ ಶಾಲಾ, ಕಾಲೇಜ್ ಓಪನ್

ನವದೆಹಲಿ: ಕೊರೊನಾ ನಿಯಂತ್ರಿಸಲು ದೇಶದಾದ್ಯಂತ ವಿಧಿಸಲಾಗಿರುವ ಲಾಕ್‌ಡೌನ್‌ ಅನ್ನು  ಕೇಂದ್ರ ಸರ್ಕಾರ ಮೂರನೇ ಹಂತದ ಅನ್ ಲಾಕ್ ಮಾಡಿದೆ.

ಈ ಬಗ್ಗೆ ಕೇಂದ್ರ ಸರ್ಕಾರದ ಗೃಹ ಸಚಿವಾಲಯ ಇಂದು ಮಾರ್ಗಸೂಚಿ ಬಿಡುಗಡೆ ಮಾಡಿದೆ.  ಆಗಸ್ಟ್‌ 5ರಿಂದ ಯೋಗ ಕೇಂದ್ರ, ಜಿಮ್‌ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ರಾತ್ರಿ ವೇಳೆ ಸಂಚಾರಕ್ಕೆ ವಿಧಿಸಲಾಗಿದ್ದ ಕರ್ಫ್ಯೂ ತಗೆದು ಹಾಕಲಾಗಿದೆ.

ಆಗಸ್ಟ್‌ 15ರಂದು ದೇಶದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಗಳನ್ನು ನಡೆಸಬಹುದಾಗಿದ್ದು, ಸಾಮಾಜಿಕ  ಅಂತರ ,  ಮಾಸ್ಕ್‌ ಧರಿಸುವುದು ಕಡ್ಡಾಯವಾಗಿ‌ ಪಾಲಿಸಬೇಕು ಎಂದು ಗೃಹ  ಸಚಿವಾಲಯ ತಿಳಿಸಿದೆ.

ಶಾಲೆ, ಕಾಲೇಜುಗಳು ಹಾಗೂ ತರಬೇತಿ ಸಂಸ್ಥೆಗಳು ಆಗಸ್ಟ್‌ 31ರ ವರೆಗೂ ಮುಚ್ಚಿರಲಿವೆ. ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ  ಸಭೆ–ಸಮಾರಂಭಗಳಿಗೆ ಅವಕಾಶ ನೀಡಲಾಗಿಲ್ಲ.  ಮೆಟ್ರೊ ರೈಲು ಕಾರ್ಯಾಚರಣೆ, ಸಿನಿಮಾ ಮಂದಿರಗಳು, ಈಜು ಕೊಳಗಳು, ಮನರಂಜನಾ ಪಾರ್ಕ್‌ಗಳು, ರಂಗ ಮಂದಿರಗಳು, ಬಾರ್‌ ಹಾಗೂ ಆಡಿಟೋರಿಯಂಗಳಿಗೆ ನಿರ್ಬಂಧ ಮುಂದುವರಿಸಲಾಗಿದೆ.ಇದು ಕಂಟೈನ್‌ಮೆಂಟ್‌ ವಲಯಗಳಿಗೆ ಅನ್ವಯವಾಗುವುದಿಲ್ಲ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

To Top