ಚೆನ್ನೈ: ಬಹುಭಾಷಾ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೊನಾ ಪಾಸಿಟಿವ್ ಪತ್ತಯಾಗಿದೆ. ಈ ಬಗ್ಗೆ ಸ್ವತಃ ಎಸ್. ಪಿ. ಬಾಲಸುಬ್ರಹ್ಮಣಂ ಅವರೇ ತಿಳಿಸಿದ್ದು, ಈ ಬಗ್ಗೆ ಯಾರೂ ಆತಂಕ ಪಡಬೇಡಿ ಎಂದು ಹೇಳಿದ್ದಾರೆ.
ಆಸ್ಪತ್ರೆಯಿಂದಲೇ ಫೇಸ್ಬುಕ್ ವಿಡಿಯೋ ಮಾಡಿರುವ ಅವರು, ಜ್ವರ, ಶೀತ ಹಾಗೂ ಎದೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ಕೊರೊನಾ ಟೆಸ್ಟ್ ಮಾಡಿಸಿಕೊಂಡೆ. ಈ ಸಂದರ್ಭದಲ್ಲಿ ವರದಿ ಪಾಸಿಟಿವ್ ಬಂದಿದೆ. ವೈದ್ಯರು ಮನೆಯಲ್ಲೇ ಐಸೋಲೇಟ್ ಆಗಲು ತಿಳಿಸಿದರು. ಆದರೆ ನಾನು ಚೈಲೂಮೇಡುನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿಸಿದ್ದಾರೆ.
https://www.facebook.com/watch/SPB/
ಸದ್ಯ ಜ್ವರ ಕಡಿಮೆಯಾಗಿದ್ದು, ಸ್ವಲ್ಪ ಶೀತ ಇದೆ. ಇನ್ನೇನು ಎರಡು ದಿನದಲ್ಲಿ ಕಡಿಮೆಯಾಗಬಹುದು. ಸದ್ಯ ಆರೋಗ್ಯ ಸುಧಾರಿಸಿಕೊಳ್ಳುತ್ತಿದ್ದು, ವೈದ್ಯರು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ತನ್ನ ಸಂಪರ್ಕದಲ್ಲಿದ್ದವರನ್ನು ಈ ಕೂಡಲೇ ಪರೀಕ್ಷೆ ಮಾಡಿಕೊಳ್ಳಲು ವಿನಂತಿಸಿಕೊಂಡಿದ್ದು, ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದು, ಬಹುಭಾಷಾ ಗಾಯಕರಾದ ಗಾನ ಗಂಧರ್ವ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮದ್ರಾಸಿನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು, ಆರೋಗ್ಯದ ಕುರಿತು ಯಾರೂ ಆತಂಕಪಡುವ ಅಗತ್ಯವಿಲ್ಲವೆಂದು ಹೇಳಿದ್ದಾರೆ. ನಮ್ಮೆಲ್ಲರ ಪ್ರೀತಿಯ ಗಾಯಕ, ಶ್ರೀಯುತ ಎಸ್ ಪಿಬಿ ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಅಂತ ಸಚಿವರು ಬರೆದುಕೊಂಡಿದ್ದಾರೆ.
ಬಹುಭಾಷಾ ಗಾಯಕರಾದ ಗಾನ ಗಂಧರ್ವ ಶ್ರೀ #SPBalasubrahmanyam ಅವರಿಗೆ ಕೊರೊನ ಸೋಂಕು ದೃಢಪಟ್ಟಿದೆ.
ಮದ್ರಾಸಿನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು, ತಮ್ಮ ಆರೋಗ್ಯದ ಕುರಿತು ಯಾರೂ ಆತಂಕಪಡುವ ಅಗತ್ಯವಿಲ್ಲವೆಂದು ಸ್ವತಃ ತಿಳಿಸಿರುವ ನಮ್ಮೆಲ್ಲರ ಪ್ರೀತಿಯ ಗಾಯಕ, ಶ್ರೀಯುತ ಎಸ್ ಪಿಬಿ ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. pic.twitter.com/HJEE0P8Qoc
— B Sriramulu (@sriramulubjp) August 5, 2020



