ಮುಂಬೈ: ದೇಶದಲ್ಲಿ ಕೊರೊನಾ ಭೀತಿ ಕಾಣಿಸಿಕೊಂಡ ನಂತರ 45 ದಿನಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 1.2 ಲಕ್ಷ ಕೋಟಿ ಮೌಲ್ಯದ ಹೊಸ ಕರೆನ್ಸಿ ನೋಟ್‌ಗಳನ್ನು ಚಲಾವಣೆಗೆ ತಂದಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದರು.
ಎಟಿಎಂಗಳು ದಿನ ಪೂರ್ತಿ ತೆರೆದಿರಲಿವೆ. ಬ್ಯಾಂಕಿಂಗ್ ಸೇವೆ ಇಲ್ಲದ ಪ್ರದೇಶಗಳಿಗೆ ವಾಣಿಜ್ಯ ಪ್ರತಿನಿಧಿಗಳು ಅಗತ್ಯ ಸೌಲಭ್ಯ ಒದಗಿಸುತ್ತಿದ್ದಾರೆ. ಮಾರ್ಚ್ ತಿಂಗಳಲ್ಲಿ ನಗದು ವಹಿವಾಟಿನ ಪ್ರಮಾಣ 86,000 ಕೋಟಿಯಷ್ಟು ಹೆಚ್ಚಾಗಿದೆ ಎಂದರು.
RBI Governor’s address to the media https://t.co/uhsojdIeSF
— ReserveBankOfIndia (@RBI) April 17, 2020
ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಣ ಬಿಡಿಸಿಕೊಳ್ಳುವವರ ಪ್ರಮಾಣ ಹೆಚ್ಚಾಗಿದೆ ಎಂದು ಮಾಧ್ಯಮ ವರದಿ ಹಿನ್ನೆಲೆ ಆರ್‌ಬಿಐ ಗವರ್ನರ್ ಹೊಸ ಕರೆನ್ಸಿ ನೋಟು ಚಲಾವಣೆಗೆ ತಂದಿದೆ ಎಂದರು.
ಮಾರ್ಚ್ 1ರಿಂದ ಏಪ್ರಿಲ್ 14ರ ನಡುವೆ ಆರ್‌ಬಿಐನ ಪ್ರಾದೇಶಿಕ ಕಚೇರಿಗಳು 1.2 ಲಕ್ಷ ಕೋಟಿಯಷ್ಟು ನಗದನ್ನು ಚಲಾವಣೆ ಮಾಡಿವೆ. ಕೊರೊನಾ ವೈರಸ್ ದೇಶದಲ್ಲಿ ವ್ಯಾಪಿಸಿದ ನಂತರ ನಗದು ಪಡೆಯುವ ಪ್ರಮಾಣ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಬ್ಯಾಂಕ್‌ಗಳು ಎಟಿಎಂಗಳಿಗೆ ನಿಯಮಿತವಾಗಿ ಹಣ ತುಂಬುತ್ತಿವೆ. ಇಂಟರ್ನೆಟ್ ಮೊಬೈಲ್ ಬ್ಯಾಂಕಿಂಗ್ ಡೌನ್‌ಟೈಮ್ ಸಹ ಘೋಷಿಸಿಲ್ಲ. ಬ್ಯಾಂಕ್‌ಗಳು ತಮ್ಮ ವ್ಯವಹಾರವನ್ನು ನಿರಂತರವಾಗಿ ಮುಂದುವರಿಸಲು ಯೋಜನೆಗಳನ್ನು ರೂಪಿಸಬೇಕು. ಗ್ರಾಹಕರಿಗೆ ನಿರಂತರವಾಗಿ ಸೌಲಭ್ಯ ಒದಗಿಸಲು ವಿಪತ್ತು ನಿರ್ವಹಣಾ ಸ್ಥಳ ಅಥವಾ ಪರ್ಯಾಯ ಸ್ಥಳಗಳಿಂದ ಕೆಲಸ ಮಾಡಬೇಕು . ಕೋವಿಡ್–19ರಿಂದ ಅರ್ಥಿಕತೆ ಚೇತರಿಸಿಕೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.



