ಶ್ರೀನಗರ: ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ –ಚೀನಾ ಸೇನೆ ನಡುವೆ ನಡೆದ ಸಂಘರ್ಷ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಲಡಾಕ್‍ನ ಲೇಹ್‍ಗೆ ಭೇಟಿ ನೀಡಿ ಸಭೆ ನಡೆಸಿದ್ದಾರೆ.
ಪ್ರಧಾನಿ ಮೋದಿ ಅವರು ಲಡಾಕ್‍ನ ನಿಮುನಲ್ಲಿರುವ ಫಾರ್ವರ್ಡ್ ಲೊಕೇಶನ್‍ನಲ್ಲಿದ್ದಾರೆ. ಇಂದು ಮುಂಜಾನೆ ಲಡಾಕ್ ತಲುಪಿದ್ದು ಸೈನ್ಯ, ವಾಯುಪಡೆ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿಯೊಂದಿಗೆ ಸಂವಹನ ನಡೆಸುತ್ತಿದ್ದಾರೆ. ಈ ಪ್ರದೇಶದ 11,000 ಅಡಿ ಎತ್ತರದಲ್ಲಿದ್ದು, ನಿಮು ಕಠಿಣ ಭೂಪ್ರದೇಶಗಳಲ್ಲೊಂದು.

ಸದ್ಯ ಪ್ರಧಾನಿ ಮೋದಿ ಅವರು ಸೈನಿಕರೊಂದಿಗೆ ಸಂವಹನ ನಡೆಸುತ್ತಿದ್ದಾರೆ. ನಂತರ ಗಾಯಗೊಂಡ ಸೈನಿಕರನ್ನು ಮಿಲಿಟರಿ ಆಸ್ಪತ್ರೆಯಲ್ಲಿ ಭೇಟಿ ನೀಡಿ ಅವರಿಗೆ ಆತ್ಮಸ್ಥೈರ್ಯ ತುಂಬಲಿದ್ದಾರೆ. ಮೋದಿ ಜೊತೆ ರಕ್ಷಣಾ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ ಸಾಥ್ ನೀಡಿದ್ದಾರೆ.
ಜೂನ್ 15 ದಂದು ಭಾರತ- ಚೀನಾ ಸೇನೆ ನಡುವೆ ಸಂಘರ್ಷ ನಡೆದಿದ್ದು,ಇದರಲ್ಲಿ 20 ಮಂದಿ ಭಾರತದ ಸೈನಿಕರು ಹುತಾತ್ಮರಾಗಿದ್ದರು. ಚೀನಾದ ಸೈನಿಕತರು ಸಾವನ್ನಪ್ಪಿದ್ದು, ಚೀನಾ ಸಂಖ್ಯೆಯನ್ನು ಬಹಿರಂಗಪಡಿಸಿಲ್ಲ. ಸಂಘರ್ಷದ ಬಳಿಕೆ ಶಾಂತಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ದೇಶಗಳ ನಡುವೆ ಸುಧೀರ್ಘ ಮಾತುಕತೆ ನಡೆಯುತ್ತಲಿದೆ.

ಎರಡು ದೇಶದ ಮಿಲಿಟರಿ ಹಂತದ ಮಾತುಕತೆ ನಡೆದಿದೆ. ಮಂಗಳವಾರ ಬೆಳಗ್ಗೆ 10.30ಕ್ಕೆ ಆರಂಭವಾಗಿದ್ದ ಸಭೆ ರಾತ್ರಿ ಹನ್ನೊಂದು ಗಂಟೆವರೆಗೂ ನಡೆದಿತ್ತು. ಸುಧೀರ್ಘ 11 ಗಂಟೆಗಳ ಬಳಿಕ ಭಾರತದ ಆಕ್ರಮಿತ ಪ್ರದೇಶ ಹಾಗೂ ವಾಸ್ತವ ಗಡಿ ರೇಖೆಯಿಂದ ಹಿಂದೆ ಸರಿಯಲು ಚೀನಾ ಸೇನೆ ಒಪ್ಪಿಕೊಂಡಿದೆ ಎಂದು ಹೇಳಲಾಗುತ್ತಿದೆ.
Prime Minister Narendra Modi makes a surprise visit to Ladakh, being briefed by senior officials at a forward position in Nimu. pic.twitter.com/8I6YiG63lF
— ANI (@ANI) July 3, 2020



