ಮುಂಬೈ: ಗಾಲ್ವನ್ ಕಣಿವೆ ಪ್ರದೇಶದಲ್ಲಿ ನಡೆದ ಸಂಘರ್ಷದಲ್ಲಿ ಚೀನಾದ 40 ಯೋಧರು ಮೃತಪಟ್ಟಿರಬಹುದು ಎಂದು ಕೇಂದ್ರ ಸಚಿವ ಜನರಲ್ ವಿ.ಕೆ.ಸಿಂಗ್ ಹೇಳಿದ್ದಾರೆ.
ಈ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದು, ಚೀನಾ ತನ್ನ ದೇಶದಲ್ಲಿ ಎಷ್ಟು ಸೈನಿಕರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ನೀಡಿಲ್ಲ.
ನಮ್ಮ 20 ಯೋಧರು ಹುತಾತ್ಮರಾಗಿದ್ದಾರೆ. ಇದರ ದುಪ್ಪಟ್ಟು ಸಾವು ಚೀನಾದಲ್ಲಿ ಆಗಿದೆ ಎಂದು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
1962ರ ಯುದ್ಧ ಸೇರಿದಂತೆ ಚೀನಾ ದೇಶವು ಯಾವ ಯುದ್ಧದಲ್ಲಿ ಸಾವುನೋವಿನ ಮಾಹಿತಿ ಪ್ರಕಟಿಸಿದ ಉದಾಹರಣೆಯೇ ಇಲ್ಲ ಎಂದಿದ್ದಾರೆ. ಚೀನಾದ ಕಡೆ ಸಾವುನೋವು ಸಂಭವಿಸಿವೆ ಎಂದು ಚೀನಾ ಸರ್ಕಾರಿ ನಿಯಂತ್ರಿತ ಗ್ಲೋಬಲ್ ಟೈಮ್ಸ್ ವರದಿ ಮಾಡಿತ್ತು. ಎಷ್ಟು ಎಂದು ತಿಳಿಸಿಲ್ಲ.



