ಹೈದರಾಬಾದ್: ನೋಡ ನೋಡುತ್ತಲೇ ಕ್ರೇನ್ ಕುಸಿದು ಬಿದ್ದ ಪರಿಣಾಮ 11 ಮಂದಿ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.
ವಿಶಾಖಪಟ್ಟಣಂನ ಹಿಂದೂಸ್ತಾನ್ ಶಿಪ್‍ಯಾರ್ಡ್ ಲಿಮಿಟೆಡ್‍ನಲ್ಲಿಈ ದುರಂತ ನಡೆದಿದೆ. ಭಾರೀ ಗ್ರಾತದ ಕ್ರೇನ್ ಕುಸಿದು ಬಿದ್ದು 11 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
#UPDATE: The death toll in the crane collapse incident at Hindustan Shipyard Limited rises to 11: Visakhapatnam District Collector Vinay Chand #AndhraPradesh https://t.co/fDaFLqSPZA
— ANI (@ANI) August 1, 2020
ಪ್ರತಿದಿನದಂತೆ ಇಂದು ಕೂಡ ಶಿಪ್ ಯಾರ್ಡ್‌ನಲ್ಲಿ ಲೋಡ್ ಮತ್ತು ಅನ್ ಲೋಡ್ ಕಾರ್ಯ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕ್ರೇನ್ ಕುಸಿದು ಬಿದ್ದಿದೆ. ಮೃತರನ್ನು ಶಿಪ್ ಯಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಶಿಪ್ ಯಾರ್ಡ್ ನೌಕರರು ಮತ್ತು ಉಳಿದವರು ಗುತ್ತಿಗೆ ಸಿಬ್ಬಂದಿ ಎಂದು ವಿಶಾಖಪಟ್ಟಣಂ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಪೊಲೀಸರು ಮತ್ತು ರಕ್ಷಣಾ ಪಡೆ ಸ್ಥಳಕ್ಕೆ ದೌಡಾಯಿಸಿದ್ದು, ಕ್ರೇನ್ ಕೆಳಗೆ ಸಿಲುಕಿರುವ ಮೃತದೇಹಗಳನ್ನು ಹೊರ ತೆಗೆಯುವ ಕಾರ್ಯ ಮಾಡುತ್ತಿದ್ದಾರೆ.ಕ್ರೇನ್ ದುರಂತದ ಬಗ್ಗೆ ತಿಳಿದು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ವಿಶಾಖಪಟ್ಟಣಂ ಜಿಲ್ಲಾಧಿಕಾರಿ ಮತ್ತು ನಗರ ಪೊಲೀಸ್ ಮುಖ್ಯಸ್ಥರಿಗೆ ತಕ್ಷಣವೇ ಈ ಕುರಿತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.



