Connect with us

Dvgsuddi Kannada | online news portal | Kannada news online

ಮೇ.31 ವರೆಗೆ ಲಾಕ್ ಡೌನ್ ವಿಸ್ತರಣೆ : 4.0 ಲಾಕ್ ಡೌನ್ ನಲ್ಲಿ ಏನು ಇರಲಿದೆ ..? ಏನು ಇರಲ್ಲ ..?

ಪ್ರಮುಖ ಸುದ್ದಿ

ಮೇ.31 ವರೆಗೆ ಲಾಕ್ ಡೌನ್ ವಿಸ್ತರಣೆ : 4.0 ಲಾಕ್ ಡೌನ್ ನಲ್ಲಿ ಏನು ಇರಲಿದೆ ..? ಏನು ಇರಲ್ಲ ..?

ನವವದೆಹಲಿ:  ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಹೆಚ್ಚಾಗುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರ ಮೇ. 31 ವರೆಗೆ ಲಾಕ್‍ಡೌನ್ ವಿಸ್ತರಿಸಿದೆ. ಇಂದು ಮೂರನೇ ಹಂತದ ಲಾಕ್ ಡೌನ್ ಮುಗಿದ ಹಿನ್ನೆಲೆ ನಾಲ್ಕನೇ ಹಂತದ ಲಾಕ್ ಡೌನ್ ದೇಶದಾದ್ಯಂತ ಇಂದು ಮಧ್ಯ ರಾತ್ರಿಯಿಂದ ಜಾರಿಗೆ ಬರಲಿದೆ.

ಕೇಂದ್ರ ಸರ್ಕಾರ ಹೊಸದಾಗಿ ಮಾರ್ಗಸೂಚಿಯನ್ನು  ಪ್ರಕಟಿಸಿದೆ. ದೇಶದ ಜನ ಮತ್ತೆ ಎರಡು ವಾರ ಲಾಕ್ ಡೌನ್ ನಿಯಮ ಪಾಲಿಸಬೇಕಿದೆ.

ಏನು ಇರಲಿದೆ..?

* ಉಭಯ ರಾಜ್ಯಗಳ ಪರವಾನಿಗೆ ಪಡೆದು ವಾಹನ ಹಾಗೂ ಬಸ್ ಸಂಚಾರಕ್ಕೆ ಪಾಸ್ ನೀಡಬಹುದು.
* ಅಂತಾರಾಜ್ಯಗಳ ಮಧ್ಯ ಬಸ್, ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವ ನಿರ್ಧಾರ ಆಯಾಯಾ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ಬಿಟ್ಟಿದ್ದು.
* ಎಲ್ಲ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಸಿಬ್ಬಂದಿ, ಪಾರಾ ಮೆಡಿಕಲ್ ಸಿಬ್ಬಂದಿ, ಸ್ಯಾನಿಟೈಸನ್ ಸಿಬ್ಬಂದಿ, ಅಂಬುಲೆನ್ಸ್ ಬಳಸಿಕೊಳ್ಳಬಹುದು.
ಎಲ್ಲ ಮಾದರಿಯ ಸರಕು ಸಾಗಣೆಯ ವಾಹನಗಳ ಓಡಾಟಕ್ಕೆ ಅನುಮತಿ.

ಏನು ಇರಲ್ಲ..?

* ದೇಶಿ ಮತ್ತು ವಿದೇಶಿ ವಿಮಾನಗಳ ಹಾರಾಟಕ್ಕೆ ನಿಷೇಧ.
* ಮೆಟ್ರೋ, ರೈಲು ಸಂಚಾರ ಇರಲ್ಲ.
* ಶಾಲೆ, ಕಾಲೇಜು, ತರಬೇತಿ, ಶಿಕ್ಷಣ ಸಂಸ್ಥೆಗಳು ಬಂದ್. ಆನ್‍ಲೈನ್ ಅಥವಾ ಸಾಮಾಜಿಕ ಅಂತರ ಕಾಪಾಡಿಕೊಂಡ್ರೆ ಅನುಮತಿ ಸಿಗುವ ಸಾಧ್ಯತೆ.
* ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಿಗೆ ಹೋಮ್ ಡೆಲಿವರಿ ಅವಕಾಶ.
* ಥಿಯೇಟರ್, ಶಾಪಿಂಗ್ ಮಾಲ್, ಜಿಮ್ ಕೇಂದ್ರ, ಸ್ವಿಮಿಂಗ್ ಪೂಲ್, ಪಾರ್ಕ್, ಸಿನಿಮಾ ಹಾಲ್, ಬಾರ್, ಸಭಾಂಗಣ ತೆರೆಯುವಂತಿಲ್ಲ.
* ಸ್ಪೋರ್ಟ್ಸ್  ಕಾಂಪ್ಲೆಕ್ಸ್ ಮತ್ತು ಸ್ಟೇಡಿಯಂ (ಕ್ರೀಡಾಂಗಣ)ಗಳಿಗೆ ಷರತ್ತು ಬದ್ಧ ಅನುಮತಿ
* ಎಲ್ಲ ಸಾಮಾಜಿಕ/ಧಾರ್ಮಿಕ/ ರಾಜಕೀಯ/ ಕ್ರೀಡಾ/ ಮನರಂಜನಾ/ಸಾಂಸ್ಕೃತಿಕ/ಕೌಟುಂಬಿಕ ಸೇರಿದಂತೆ ಎಲ್ಲ ಕಾರ್ಯಕ್ರಮಗಳಿಗೂ ನಿಷೇಧ
* ಎಲ್ಲ ಧಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕರಿಗೆ ಪ್ರವೇಶ ಇಲ್ಲ. ಯಾವುದೇ ಧಾರ್ಮಿಕ ಸಭೆಗಳನ್ನು ನಡೆಸುವಂತಿಲ್ಲ.

ವಲಯ ವಿಂಗಡನೆ ಆಯಾ ರಾಜ್ಯಕ್ಕೆ ಬಿಟ್ಟಿದ್ದು

  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನೀಡುವ ಮಾಹಿತಿ ಗಣನೆಗೆ ತೆಗೆದುಕೊಂಡ ನಂತರ ಕೆಂಪು, ಹಸಿರು ಮತ್ತು ಕಿತ್ತಳೆ ವಲಯಗಳೆಂದು ಆಯಾ ರಾಜ್ಯ/ ಕೇಂದ್ರಾಡಳಿತ ಸರ್ಕಾರಗಳು ನಿರ್ಧರಿಸುತ್ತವೆ.
  •  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನೀಡುವ ಮಾಹಿತಿ ಆಧಾರದ ಮೇಲೆ ಆಯಾ ಪ್ರದೇಶದ ಜಿಲ್ಲಾಡಳಿತವು ರೆಡ್, ಗ್ರೀನ್ ಮತ್ತು ಆರೇಂಜ್ ಝೋನ್ ಎಂದು ಘೋಷಿಸಬಹುದು.
  • ಕಂಟೈನ್‍ಮೆಂಟ್ ಝೋನ್‍ಗಳ ಮೇಲೆ ಹೆಚ್ಚಿನ ನಿಗಾ ಇಡಬೇಕು. ಇಲ್ಲಿ ತುರ್ತು ಚಿಕಿತ್ಸೆ, ಅಗತ್ಯ ವಸ್ತು, ಔಷಧಿಗಳನ್ನು ಪಡೆಯಲು ಮಾತ್ರ ಜನರು ಮನೆಯಿಂದ ಹೊರಗೆ ಬರಬೇಕು.
  • ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಜನರ ಚಲನವನದ ಮೇಲೆ ನಿಗಾ ಇಡಬೇಕು. ಮನೆಯಿಂದ ಮನೆಗೆ ಕಣ್ಗಾವಲು ಇಡಬೇಕು. ಜೊತೆಗೆ ಅಗತ್ಯವಿರುವ ಔಷಧಿ ಅಂಗಡಿಗಳ ಮೇಲೂ ನಿಗಾ ಇಡಬೇಕು.

ಕರ್ಫ್ಯೂ ಮುಂದುವರಿಕೆ:
ರಾತ್ರಿ 7ರಿಂದ ಬೆಳಗ್ಗೆ 7 ಗಂಟೆ ವರೆಗೆ ಅಗತ್ಯ ಚಟುವಟಿಕೆ ಹೊರತುಪಡಿಸಿ ವೈಯಕ್ತಿಕ ಸಂಚಾರವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಈ ವೇಳೆ ಸೆಕ್ಷನ್ 144(ಕರ್ಫ್ಯೂ) ಜಾರಿ ಇರಲಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಆಡಳಿತಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಸುರಕ್ಷತೆ ದೃಷ್ಟಿಯಿಂದ 65 ವರ್ಷ ಮೇಲ್ಪಟ್ಟ ವೃದ್ಧರು, ಗರ್ಭಿಣಿಯರು, 10 ವರ್ಷದ ವಳಗಿನ ಮಕ್ಕಳು ಆರೋಗ್ಯ ಸಮಸ್ಯೆ ಹಾಗೂ ಇತರೆ ತುರ್ತು ಸಂದರ್ಭ ಹೊರತುಪಡಿಸಿ ಉಳಿದೆಲ್ಲ ಸಮಯ ಮನೆಯಲ್ಲೇ ಇರಬೇಕು.

ಕಂಟೈನ್ ಮೆಂಟ್ ಝೋನ್ ಹೊರತುಪಡಿಸಿ ಉಳಿದ ಕಡೆ ಅವಕಾಶ

ನಿಷೇಧಿತ ಅಂಶವನ್ನು ಹೊರತುಪಡಿಸಿ, ಉಳಿದೆಡೆ ಆರ್ಥಿಕ  ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಕಂಟೈನಮೆಂಟ್ ಝೋನ್‍ಗಳಲ್ಲಿ ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಉಳೆದಲ್ಲವನ್ನೂ ಬಂದ್ ಮಾಡಲಾಗುವುದು. ಉಳಿದಂತೆ ಎಲ್ಲ ರಾಜ್ಯಗಳು
ಕೇಂದ್ರಾಡಳಿತ ಪ್ರದೇಶಗಳು ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಬಹುದಾಗಿದೆ. ಯಾವ ಚಟುವಟಿಕೆಗಳಿಗೆ ಅವಕಾಶ ನೀಡಬೇಕು, ಯಾವುದನ್ನು ಬಂದ್ ಮಾಡಬೇಕು ಎಂಬುದರ ಕುರಿತು ನಿರ್ಧಾರ ಕೈಗೊಳ್ಳಬೇಕು. ಅಗತ್ಯಕ್ಕೆ ತಕ್ಕಂತೆ ಝೋನ್‍ಗಳನ್ನು ಮಾಡಿಕೊಳ್ಳಬೇಕು. ಅಲ್ಲದೆ ಅಗತ್ಯಕ್ಕೆ ತಕ್ಕಂತೆ ನಿರ್ಬಂಧ ಹೇರಬಹುದಾಗಿದೆ ಎಂದು ಕೇಂದ್ರ ಸರ್ಕಾರ  ತಿಳಿಸಿದೆ.

ನಿಯಮ ಪಾಲನೆ ಕಡ್ಡಾಯ

1. ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು.
2. ಸಾರ್ವಜನಿಕ ಮತ್ತು ಕೆಲಸದ ಸ್ಥಳದಲ್ಲಿ ಉಗುಳುವುದು ದಂಡಾರ್ಹ.
3. ಸಾರ್ವಜನಿಕ ಸ್ಥಳ ಮತ್ತು ಪ್ರಯಾಣದ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು.
4. ಮದುವೆ ಇನ್ನಿತರ ಸಮಾರಂಭಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಜೊತೆಗೆ 50ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ.
5. ಅಂತ್ಯಕ್ರಿಯೆಗಳ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಜೊತೆ 20ಕ್ಕಿಂಯ ಹೆಚ್ಚು ಜನರು ಸೇರುವಂತಿಲ್ಲ.

6. ಸಾರ್ವಜನಿಕ ಸ್ಥಳದಲ್ಲಿ ಮದ್ಯ, ಪಾನ್, ಗುಟ್ಕಾ , ತುಂಬಾಕು ಸೇವನೆ ಮಾಡುವಂತಿಲ್ಲ.
7. ಅಂಗಡಿಗಳಲ್ಲಿ ಐದು ಜನಕ್ಕಿಂತ ಹೆಚ್ಚು ಕೆಲಸ ಮಾಡುವಂತಿಲ್ಲ. ಮಾರಾಟಗಾರರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.
8. ವರ್ಕ್ ಫ್ರಮ್ ಹೋಮ್ ಗೆ ಮೊದಲ ಆದ್ಯತೆ ನೀಡುವುದು.
9. ಕಂಪನಿ, ಸರ್ಕಾರಿ ಕಚೇರಿ ಸೇರಿದಂತೆ ಸಾಮಾನ್ಯ ಪ್ರದೇಶಗಳ ಪ್ರವೇಶ ಮತ್ತು ನಿರ್ಗಮನ ದ್ವಾರದಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸೋದು.
10. ಕೆಲಸದ ಸ್ಥಳದಲ್ಲಿ ಸಾಮಾಜಿಕ ಅಂತರ ಮತ್ತು ಶಿಫ್ಟ್ ಗಳಲ್ಲಿ ಕೆಲಸಕ್ಕೆ ಆದ್ಯತೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top