Connect with us

Dvgsuddi Kannada | online news portal | Kannada news online

ಭಾರತದಲ್ಲಿ ಶ್ರೀಘ್ರದಲ್ಲಿಯೇ ಬರಲಿದೆ ಜಿಯೋ 5ಜಿ ಸಿಮ್ ..!

ಪ್ರಮುಖ ಸುದ್ದಿ

ಭಾರತದಲ್ಲಿ ಶ್ರೀಘ್ರದಲ್ಲಿಯೇ ಬರಲಿದೆ ಜಿಯೋ 5ಜಿ ಸಿಮ್ ..!

ಬೆಂಗಳೂರು: ರಿಲಯನ್ಸ್‌ ಜಿಯೊ ಪ್ಲಾಟ್‌ಫಾರ್ಮ್ಸ್‌ನಲ್ಲಿ ತಂತ್ರಜ್ಞಾನ ಕ್ಷೇತ್ರ ದೊಡ್ಡ ಸಂಸ್ಥೆಯಾಗಿರುವ ಗೂಗಲ್ 5ಜಿ  ನೆಟ್ ವರ್ಕ್ ಅಭಿವೃದ್ಧಿಪಡಿಸಲು 33.737 ಕೋಟಿ  ಹೂಡಿಕೆ ಮಾಡಿದೆ.

ರಿಲಯನ್ಸ ಜಿಯೋ ಗೂಗಲ್‌ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 33,737 ಕೋಟಿ ಹೂಡಿಕೆ ಮಾಡುವ ಮೂಲಕ ಶೇ 7.7ರಷ್ಟು ಪಾಲುದಾರಿಕೆ ಪಡೆಯಲಿದೆ ಎಂದು ಮುಕೇಶ್‌ ಅಂಬಾನಿ ತಿಳಿಸಿದ್ದಾರೆ.

ರಿಲಯನ್ಸ್‌ ಇಂಡಸ್ಟ್ರೀಸ್‌ನ 43ನೇ ವಾರ್ಷಿಕ ಸಭೆಯಲ್ಲಿ ಷೇರುದಾರರನ್ನು ಉದ್ದೇಶಿ ಮುಕೇಶ್‌ ಅಂಬಾನಿ ಮಾತನಾಡಿದರು. ದೇಶೀಯ ನಿರ್ಮಿತ 5ಜಿ ನೆಟ್‌ವರ್ಕ್‌ ಶೀಘ್ರವೇ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದಾರೆ.

ಜಿಯೊ ಪ್ಲಾಟ್‌ಫಾರ್ಮ್‌ ಸುಮಾರು 20 ಸ್ಟಾರ್ಟ್‌–ಅಪ್‌ ಪಾಲುದಾರರೊಂದಿಗೆ ಜಾಗತಿಕ ಗುಣಮಟ್ಟದ 4ಜಿ ಮತ್ತು 5ಜಿ ತಂತ್ರಜ್ಞಾನಗಳ ಅಭಿವೃದ್ಧಿ ಪಡಿಸುವ ಸಾಮರ್ಥ್ಯ ಹೊಂದಿದೆ. ಜಿಯೊ ಪ್ಲಾಟ್‌ಫಾರ್ಮ್ಸ್‌ನಲ್ಲಿ ವಿದೇಶಿ ಕಂಪನಿಗಳ ಹೂಡಿಕೆಗಳ ಮೂಲಕ ಒಟ್ಟು 2,12,809 ಕೋಟಿ ಸಂಗ್ರಹಿಸಿದೆ ಎಂದು ತಿಳಿಸಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top