ನಾಗಾಲ್ಯಾಂಡ್: ವೊಖಾ ನಗರದಲ್ಲಿ ಗುರುವಾರ ಮುಂಜಾನೆ 3.03ರ ವೇಳೆಗೆ ಭೂಕಂಪ ಸಂಭವಿಸಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 3.8ರಷ್ಟು ದಾಖಲಾಗಿದೆ.
ಭೂ ಕಂಪನದ ಕೇಂದ್ರ ಬಿಂದು ವೊಖಾದಿಂದ ಸುಮಾರು 9 ಕಿ.ಮೀ ಆಳದಲ್ಲಿ ಭೂಕಂಪ ಉಂಟಾಗಿದೆ ಎಂದು ಭಾರತದ ರಾಷ್ಟ್ರೀಯ ಭೂಗರ್ಭ ಇಲಾಖೆ ತಿಳಿಸಿದೆ.
ಇನ್ನು ನಿನ್ನೆ ತಡರಾತ್ರಿ 1.14ರ ಸುಮಾರಿಗೆ ಮಿಜೋರಾಂನ ಚಾಂಫಾಯ್ ಜಿಲ್ಲೆಯ ದಕ್ಷಿಣ ವಲಯದಲ್ಲಿ 4.5ರಷ್ಟು ತೀವ್ರತೆಯ ಭೂಕಂಪನ ಉಂಟಾಗಿದ್ದು, ಯಾವುದೇ ಸಾವು ವರದಿಯಾಗಿಲ್ಲ.



