ಹರಿದ್ವಾರ: ಇಡೀ ಜಗತ್ತು ಕೊರೊನಾ ವೈರಸ್ ಔಷಧಿ ಕಂಡು ಹಿಡಿಯಲು ನಿರಂತರ ಸಂಶೋಧನೆಯಲ್ಲಿ ತೊಡಗಿರುವ ಸಂಧರ್ಭದಲ್ಲಿ ಭಾರತದ ಪತಂಜಲಿ ಸಂಸ್ಥೆ ಮೊದಲ ಆಯುರ್ವೇದಿಕ್ ಔಷಧವನ್ನು ಅಭಿವೃದ್ದಿಪಡಿಸಿದೆ ಎಂದು ಯೋಗಗುರು ಬಾಬಾ ರಾಮ್‌ದೇವ್ ಅವರು ಹೇಳಿದ್ದಾರೆ.
ಈ ಬಗ್ಗೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ರಾಮ್‌ದೇವ್, ಪತಂಜಲಿ ಸಂಸ್ಥೆ ಸಂಶೋಧನೆ ನಡೆಸಿರುವ ಕೊರೊನಿಲ್ ಮತ್ತು ಸ್ವಸಾರಿ ಎಂಬ ಎರಡು ಔಷಧಿಗಳು ರೋಗಿಗಳ ಮೇಲೆ ಶೇ 100ರಷ್ಟು ಸಕಾರಾತ್ಮಕ ಫಲಿತಾಂಶ ನೀಡಿವೆ ಎಂದಿದ್ದಾರೆ.
ಪತಂಜಲಿ ಸಂಶೋಧನಾಎನ್‌ಐಎಂಎಸ್ ಸಂಸ್ಥೆಗಳು ಸಹಯೋಗದೊಂದಿಗೆ ಮೊದಲ ಆಯುರ್ವೇದಿಕ್ ಔಷಧ ಸಿದ್ಧಪಡಿಸಿವೆ. ಈ ಔಷಧಿಗಳು ದೀರ್ಘ ಸಂಶೋಧನೆಯಿಂದ, ಪ್ರಾಯೋಗಿಕವಾಗಿ ತಯಾರಾಗಿವೆ ಎಂದು ರಾಮ್‌ದೇವ್ ಅವರು ಹರಿದ್ವಾರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 3–7 ದಿನಗಳ ಅವಧಿಯಲ್ಲಿ ರೋಗಿಗಳು ಗುಣಮುಖರಾಗುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕ್ಲಿನಿಕಲ್ ಆಧರಿತ ಅಧ್ಯಯನವನ್ನು ದೆಹಲಿ, ಅಹಮದಾಬಾದ್ ಸೇರಿ ಹಲವು ನಗರಗಳಲ್ಲಿ ಕೈಗೊಳ್ಳಲಾಗಿದೆ. 280 ರೋಗಿಗಳು ಶೇ 100ರಷ್ಟು ಗುಣಮುಖರಾಗಿದ್ದಾರೆ. ಈ ಔಷಧಿ ಮೂಲಕ ಕೊರೊನಾ ನಿಯಂತ್ರಿಸಲು ಸಾಧ್ಯವಿದೆ ಎಂದರು.
ಕೊರೊನಾ ಕಿಟ್ 545ಕ್ಕೆ ಲಭ್ಯವಿದ್ದು,ಈ ಕಿಟ್ 30 ದಿನ ಬಳಸಬಹುದು.ಮುಂದಿನ ಒಂದು ವಾರದೊಳಗೆ ಎಲ್ಲ ಪತಂಜಲಿ ಮಳಿಗೆಗಳಲ್ಲಿ ಕಿಟ್ ಲಭ್ಯವಾಗಲಿದೆ. ಕಿಟ್‌ಗಳನ್ನು ಗ್ರಾಹಕರಿಗೆ ತಲುಪಿಸಲು ಆ್ಯಪ್ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.



