ಗುರುಗ್ರಾಮ್: ಉತ್ತಮ ಆರೋಗ್ಯ, ಓದುವುದಕ್ಕೆ ಬೇಕಾದ ಎಲ್ಲಾ ಸೌಲಭ್ಯ ಇದ್ದರೂ, ಈಗಿನ ಮಕ್ಕಳು ಓದವುದಕ್ಕೆ ಹಿಂಜರೆಯುವುದನ್ನು ನೋಡಿದ್ದೇವೆ. ಆದರೆ. ಇಲ್ಲೊಬ್ಬ ಯುವತಿಗೆ ವೇಲ್ ಚೇರ್ ಸಹಾಯ ಇಲ್ಲದೆ ನಿಲ್ಲಲು, ಕುಳಿತುಕೊಳ್ಳಲು ಬರುವುದಿಲ್ಲ. ಆದರೆ, ವೇಲ್ ಚೇರ್ ಮೇಲೆ ಕುಳಿತುಕೊಂಡೇ ಎಸ್ ಎಸ್‍ಎಲ್‍ಸಿಯಲ್ಲಿ 97.8%, 12ನೇ ತರಗತಿಯಲ್ಲಿ 95.2% ಅಂಕ ಗಳಿಸುವ ಮೂಲಕ ಗುರುಗ್ರಾಮ್‍ದ ವಿಶೇಷಚೇತನ ವಿದ್ಯಾರ್ಥಿ ಅನುಷ್ಕಾ ಪಂಡಾ ತನ್ನ ಅಂಗವೈಫಲ್ಯವನ್ನು ಮೀರಿ ಬೆಳೆದಿದ್ದಾಳೆ.
ಹರಿಯಾಣದ ಗುರುಗ್ರಾಮದ ಅನುಷ್ಕಾಗೆ ಬೆನ್ನುಮೂಳೆ ಸ್ನಾಯುವಿನ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ವೀಲ್‍ಚೇರ್ ಇಲ್ಲದೇ ನಿಲ್ಲಲು ಮತ್ತು ಕೂರಲು ಆಗುವುದಿಲ್ಲ. ಆದರೆ, ಓದಿನಲ್ಲಿ ಇದನ್ನೆಲ್ಲ ಲೆಕ್ಕಿಸದ ಅನುಷ್ಕಾ ವೀಲ್‍ಚೇರ್ ಮೇಲೆ ಕುಳಿತು. ದಿನಕ್ಕೆ ಎರಡು ಗಂಟೆ ಓದಿ ಸಿಬಿಎಸ್‍ಇ 12 ನೇ ತರಗತಿ ಪರೀಕ್ಷೆಯಲ್ಲಿ 95.2% ಅಂಕ ಪಡೆದಿದ್ದಾಳೆ. ಈ ಮೂಲಕ ಸಿಬಿಎಸ್ ಇ ಯಲ್ಲಿ ಅಂಗವೈಫಲ್ಯ ಇರುವ ಮಕ್ಕಳಲ್ಲಿ ಅತೀ ಹೆಚ್ಚು ಅಂಕ ಪಡೆದಿದ್ದಾಳೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಅನುಷ್ಕಾ ಪಂಡಾ, ನಾನು ದಿನದಲ್ಲಿ ಎರಡು ಗಂಟೆಗಳ ಕಾಲ ಓದುತ್ತಿದ್ದೆ. ಈಗ ನನ್ನ ಅಂಕ ನೋಡಿ ನನಗೆ ಬಹಳ ಖುಷಿಯಾಗಿದೆ. ನನ್ನ ಶಾಲೆಯಲ್ಲಿ ನನಗೆ ಬಹಳ ಬೆಂಬಲ ನೀಡಿದ್ದಾರೆ. ನಾನು ಅಂಗವಿಕಲೆ ಆಗಿದ್ದ ಕಾರಣ ನನ್ನ ಪರೀಕ್ಷೆ ಬರೆಯಲು ವಿಶೇಷ ಆಸನ ಸಿದ್ಧ ಮಾಡಿ ಕೊಟ್ಟಿದ್ದರು. ನನಗೂ ನನ್ನ ಅಂಗವೈಫಲ್ಯದ ವಿಚಾರವಾಗಿ ಬಹಳ ಕಿರುಕುಳಗಳನ್ನು ಅನುಭವಿಸಿದ್ದೇನೆ. ಆದರೆ ನಾನು ಅದ್ಯಾವೂದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಆಕೆಗೆ ಬೆನ್ನುಮೂಳೆಯ ಸಮಸ್ಯೆಯಿದ್ದು, ಒಂದು ಗಂಟೆಗೂ ಅಧಿಕ ಕಾಲ ಕೂತು ಓದಲು ಆಗುವುದಿಲ್ಲ. ಜೊತೆಗೆ ಆಕೆ ಕತ್ತಿನ ಪಟ್ಟಿಯನ್ನು ಧರಿಸುವ ಕಾರಣ ಹೆಚ್ಚುಕಾಲ ಕುಳಿತುಕೊಳ್ಳಲು ಆಗುವುದಿಲ್ಲ. ಆದರೆ ಇದನ್ನೆಲ್ಲ ಲೆಕ್ಕಿಸದೆ ದಿನಕ್ಕೆ ಎರಡು ಗಂಟೆ ಓದುತ್ತಾಳೆ ಎಂದು ಆಕೆಯ ತಂದೆ ಅನುಪ್ ಪಂಡಾ ತಿಳಿಸಿದ್ದಾರೆ.
ಅನುಷ್ಕಾ ಬೆನ್ನುಹುರಿಯಲ್ಲಿ ಜೀವಕೋಶಗಳು ನಾಶವಾಗಿದ್ದು, ಆಕೆಗೆ ಉಸಿರಾಟದ ತೊಂದರೆಯಿದೆ. ಜೊತೆಗೆ ಅವಳು ಹೆಚ್ಚು ಕಾಲ ಕುಳಿತುಕೊಳ್ಳಲು ಆಗುವುದಿಲ್ಲ. ಆದರೂ ಆಕೆ ಪರೀಕ್ಷೆ ಬರೆದಿರುವ ಸವಾಲಿನ ವಿಚಾರ ಎಂದು ಅನುಷ್ಕಾಗೆ ಚಿಕಿತ್ಸೆ ನೀಡುವ ವೈದ್ಯರು ಹೇಳಿದ್ದಾರೆ.
ಅನುಷ್ಕಾ ಕಾಲೇಜಿನ ಪ್ರಾಂಶುಪಾಲರಾದ ರೂಪ ಚಕ್ರವರ್ತಿ ಮಾತನಾಡಿ, ಅನುಷ್ಕಾ ನಮ್ಮೆಲ್ಲರಿಗೂ ಸ್ಫೂರ್ತಿ. ಅವಳಿಗೆ ಇರುವ ಓದಿನ ಮೇಲಿನ ಆಸಕ್ತಿಯನ್ನು ಬೇರೆ ಮಕ್ಕಳಲ್ಲಿ ಹುಡುಕುವುದು ಬಹಳ ಕಷ್ಟ ಎಂದು ತಿಳಿಸಿದ್ದಾರೆ.



