ಡಿವಿಜಿ ಸುದ್ದಿ, ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಈಗ ಬಿಜೆಪಿ ಸೇರಿ, ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕೋಟಿ ಒಡೆಯ ಎಂ.ಟಿ.ಬಿ. ನಾಗರಾಜ್ ಆಸ್ತಿ ಮೌಲ್ಯ ಎಷ್ಟು ಗೊತ್ತಾ..? ಅವರ ಆಸ್ತಿ ಮೌಲ್ಯ ಕೇಳಿದ್ರೆ ನೀವು ಕೂಡ ಒಮ್ಮೆ ಶಾಕ್ ಆಗ್ತೀರಾ.. ಯೆಸ್, ಬರೋಬ್ಬರಿ, 1,223 ಕೋಟಿ ಒಡೆಯನಾಗಿರುವ ಎಂ.ಟಿ.ಬಿ. ನಾಗರಾಜ್ ಹೊಸಕೋಟೆ ಬಿಜೆಪಿ ಅಭ್ಯರ್ಥಿ.
ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಎಂ.ಟಿ.ಬಿ ನಾಬಗರಾಜ್ ಈ ಮಾಹಿತಿ ಉಲ್ಲೇಖಿಸಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ 1,015 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು. ಕೇವಲ 18 ತಿಂಗಳಲ್ಲಿ 150 ಕೋಟಿಯಷ್ಟು ಆಸ್ತಿ ಮೌಲ್ಯ ಹೆಚ್ಚಳವಾಗಿದ್ದು, ಸದ್ಯ 1,223 ಕೋಟಿ ಆಸ್ತಿ ಒಡೆಯನಾಗಿದ್ದಾರೆ.
ನಿಶ್ಚಿತ ಠೇವಣಿಯಲ್ಲಿ 134.56 ಕೋಟಿ , ಪತ್ನಿಯ ಬಳಿ 32.40 ಕೋಟಿ ಇದೆ. 193 ಬ್ಯಾಂಕ್ ಖಾತೆಗಳನ್ನು ಹೊಂದಿರುವ ಎಂ.ಟಿ.ಬಿ ನಾಗರಾಜ್ ಹೊಂದಿದ್ದಾರೆ. ಸ್ಥಿರಾಸ್ತಿಗಳಲ್ಲಿ ವಿವಿಧ ಕಲ್ಯಾಣ ಮಂಟಪಗಳು, ಶಿಕ್ಷಣ ಸಂಸ್ಥೆ, ಇಂದಿರಾ ನಗರ, ಮಗರತ್ ರಸ್ತೆ, ರಿಚ್ಮಂಡ್ ರಸ್ತೆಗಳಲ್ಲಿ ವಾಣಿಜ್ಯ ಸಂಕೀರ್ಣ, ವೈಟ್‌ಫೀಲ್ಡ್, ಕೆ.ಆರ್.ಪುರಂ, ಹೊಸಕೋಟೆ, ಮಹದೇವಪುರ, ಪುತ್ತೂರು, ಕೊಟ್ಟೂರಿನಲ್ಲಿ 93 ಕೃಷಿಯೇತರ ನಿವೇಶನ ಹೊಂದಿದ್ದಾರೆ.2.54 ಕೋಟಿ ಮೌಲ್ಯದ ಐಷಾರಾಮಿ ಕಾರುಗಳನ್ನು ಹೊಂದಿದ್ದು, ಅದರಲ್ಲಿ ಪ್ರಡೊ, ಫಾರ್ಚುನರ್, ಬೆಂಜ್, ಬೊಲೇರೊ, ಲ್ಯಾಂಡ್ ರೋವರ್, ಹುಂಡೈ ಐ10 ಸೇರಿದೆ. ಅವರ ಪತ್ನಿಯ ಬಳಿ 1.72 ಕೋಟಿಯ ಪೋರ್ಶೆ ಕಾರು ಇದೆ.
ಚರಾಸ್ತಿ 419.28 ಕೋಟಿ
ಪತ್ನಿಯ ಆಸ್ತಿ 167.34 ಕೋಟ.
ಸ್ಥಿರಾಸ್ತಿಯ 417.11 ಕೋಟಿ
ಪಿತ್ರಾರ್ಜಿತ ಆಸ್ತಿಯ 2.64 ಕೋಟಿ
ಪತ್ನಿಯ ಸ್ವಯಾರ್ಜಿತ ಆಸ್ತಿ 189.14 ಕೋಟಿ
ಪಿತ್ರಾರ್ಜಿತ ಆಸ್ತಿಯ ಮೌಲ್ಯ 27.50 ಲಕ್ಷ
29.90 ಕೋಟಿ ಸಾಲ ಹೊಂದಿದ್ದು
ಪತ್ನಿಗೆ ನೀಡಿದ್ದು 1.57 ಕೋಟಿ ಸಾಲ
57 ಎಕರೆ ಕೃಷಿ ಭೂಮಿ, ಅವರ ಪತ್ನಿ ಹೆಸರಲ್ಲಿ 4 ಎಕರೆ
2.23 ಕೋಟಿ ಮೌಲ್ಯದ ಆಭರಣ



