ಡಿವಿಜಿ ಸುದ್ದಿ, ದಾವಣಗೆರೆ: ನಾಳೆ(ಜು.05) ನನ್ನ ಹುಟ್ಟುಹಬ್ಬವಿದ್ದು, ಯಾರು ಕೂಡ ಶುಭಕೋರಲು ಮನೆಗೆ ಬರುವುದು ಬೇಡ. ಈ ವರ್ಷ ಕೊರೊನಾ ವೈರಸ್ ಹಾವಳಿ ಇರುವುದರಿಂದ ನೀವು ಇದ್ದಲ್ಲಿಯೇ ಶುಭ ಹಾರೈಸಿ ಎಂದು ಸಂದಸ ಜಿ.ಎಂ. ಸಿದ್ದೇಶ್ವರ್ ಅಭಿಮಾನಿಗಳು, ಹಿತೈಷಿಗಳು ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ವಿಡಿಯೋ ಸಂದೇಶದಲ್ಲಿ ಮಾಹಿತಿ ನೀಡಿದ ಅವರು, ಪ್ರತಿ ವರ್ಷ ಅಂಧ ಮಕ್ಕಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದೆ. ಈ ವರ್ಷ ಕೊರೊನಾ ವೈರಸ್ ಬಂದಿದ್ದರಿಂದ ಮನೆಯಲ್ಲಿಯೇ ತಂದೆಯ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ನಿರ್ಧರಿಸಿದ್ದೇನೆ. ಹೀಗಾಗಿ ಅಭಿಮಾನಿಗಳು, ಹಿತೈಷಿಗಳು ತಾವು ಇದ್ದಲ್ಲಿಯೇ ವಾಟ್ಸಾಪ್, ಪೋನ್, ಫೇಸ್ ಬುಕ್ ಮೂಲಕ ಶುಭ ಹಾರೈಸಿ.
ಮುಂದಿನ ವರ್ಷ ಕೊರೊನಾ ನಿವಾರಣೆಯಾದರೆ ಮತ್ತೊಮ್ಮೆ ಅಂಧ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳೋಣ ಎಂದು ಹೇಳಿದ್ದಾರೆ.
https://www.facebook.com/permalink.php?story_fbid=274312913995591&id=105586904201527



