ಡಿವಿಜಿ ಸುದ್ದಿ, ಹೊನ್ನಾಳಿ: ಸದಾ ಒಂದಿಲ್ಲೊಂದು ಕಾರ್ಯದಿಂದ ಸಕ್ರಿಯವಾಗಿರುವ ಹೊನ್ನಾಳಿ ಶಾಸಕ ರೇಣುಕಾಚಾರ್ಯ , ಇಂದು ಸ್ವತಃ ಮುಕ್ತಿ ವಾಹನವನ್ನು ಓಡಿಸುವ ಮೂಲಕ ಚಾಲನೆ ನೀಡಿದರು.
ಹೊನ್ನಾಳಿ ಪಟ್ಟಣ ಪಂಚಾಯತಿಯಿಂದ ನೂತನವಾಗಿ ಮುಕ್ತಿವಾಹ ಚಾಲನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಾಹನಕ್ಕೆ ಚಾಲನೆ ನೀಡಿದ ನಂತರ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು, ವಾಹನವೇರಿ ಚಾಲನೆ ಮಾಡಿದ್ರು.

ಹೊನ್ನಾಳಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮುಕ್ತಿವಾಹನ ಡ್ರೈವ್ ಶಾಸಕರು ಡ್ರೈವ್ ಮಾಡಿದರು. ಈ ಹಿಂದೆ ಗ್ರಾಮವೊಂದಕ್ಕೆ ಕೆಎಸ್ ಆರ್ ಟಿ ಸಿ ಬಸ್ ಚಾಲನೆ ಮಾಡಿ ಸುದ್ದಿಯಾಗಿದ್ದ ಭಾರೀ ಸುದ್ದಿಯಾಗಿದ್ದರು. ಇದೀಗ ಮುಕ್ತಿವಾಹನ ಚಾಲನೆ ಮಾಡಿ ಗಮನ ಸೆಳೆದಿದ್ದಾರೆ.




