ಡಿವಿಜಿ ಸುದ್ದಿ, ಮಂಗಳೂರು: ಕಳೆದ ವಾರ ಮಂಗಳೂರಲ್ಲಿ ನಡೆದ ಗಲಭೆ ಉತ್ತಮವಾಗಿ ಕಾರ್ಯ ನಿರ್ವಹಿಸಿದ 148 ಪೊಲೀಸರಿಗೆ 10 ಲಕ್ಷ ರೂ. ಬಹುಮಾನ ನೀಡಲಾಗಿದೆ ಎಂಬ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದೊಂದು ಸುಳ್ಳು ಸುದ್ದಿ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಹರ್ಷ ಸ್ಪಷ್ಟಪಡಿಸಿದರು.
ಕೆಲ ಕಿಡಿಗೇಡಿಗಳು ಇಲಾಖೆಯ ಹೆಸರಿನಲ್ಲಿ ತಪ್ಪು ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಅಧಿಕೃತ ಸಂವಹನದಂತೆ ತಪ್ಪು ಮಾಹಿತಿಯನ್ನು ಕಳುಹಿಸಲಾಗುತ್ತದೆ. ಈ ಸುಳ್ಳು ಮಾಹಿತಿಗಳನ್ನು ಯಾರೂ ನಂಬಬೇಡಿ ಎಂದು ಟ್ವೀಟ್ ಮಾಡಿದ್ದಾರೆ.
https://twitter.com/compolmlr/status/1207518915678466048
ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಿಂದ ರಾಜ್ಯ ಪೊಲೀಸ್ ಮಹಾ ನಿರೀಕ್ಷರಿಗೆ ಪತ್ರವನ್ನು ಡಿ.25 ರಂದು ಬರೆಯಲಾಗಿದ್ದು, ಇದರಲ್ಲಿ ಮಂಗಳೂರು ನಗರ ಕಮಿಷನರ್ ವ್ಯಾಪ್ತಿಯ ಅಧಿಕಾರಿ,ಸಿಬ್ಬಂದಿಗೆ ನಗದು ಬಹುಮಾನ ನೀಡಿದ ಬಗ್ಗೆ ಉಲ್ಲೇಖವಿತ್ತು. ಕರ್ನಾಟಕ ಪೊಲೀಸ್ ಲೆಟರ್ ಹೆಡ್ ಇದ್ದ ಕಾರಣ ಇದು ಅಧಿಕೃತ ಪತ್ರವೆಂದೇ ತಿಳಿದು ಜನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದರು.