ಡಿವಿಜಿ ಸುದ್ದಿ, ಮಂಗಳೂರು: ಬಜ್ಪೆ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ ಬ್ಯಾಗ್‌ನಲ್ಲಿ ಪತ್ತೆಯಾಗಿದ್ದ ಸುಧಾರಿತ ಬಾಂಬ್‌ಗಳನ್ನು ಬಾಂಬ್ ನಿಷ್ಕ್ರಿಯ ದಳದ ತಜ್ಞರು ಕೆಂಜಾರು ಮೈದಾನದಲ್ಲಿ ಮರಳು ಚೀಲದ ಮಧ್ಯೆ ಇಟ್ಟು ಸ್ಫೋಟಿಸಿದ್ದಾರೆ.
ವಿಮಾನ ನಿಲ್ದಾಣದಿಂದ ನಿರ್ಜನ ಪ್ರದೇಶಕ್ಕೆ ತಗೆದುಕೊಂಡು ಹೋಗಿ ಬಾಂಬ್ ಸ್ಟೋಟಿಸಲಾಯಿತು. ಸಂಜೆ 5.33 ಕ್ಕೆ ಬಾಂಬ್ ನಾಶ ಮಾಡಲಾಯಿತು. ಟೈಮರ್ ಸಂಪರ್ಕ ಸ್ಥಗಿತವಾಗಿರುವ ಕಾರಣದಿಂದ ಬಾಂಬ್ ಇರುವ ಚೀಲವನ್ನು ತೆರೆಯದೇ ಸುಮಾರು 350 ಮೀಟರ್ ದೂರದಲ್ಲಿ ವೈರ್ ಬಳಸಿ ಸ್ಫೋಟಿಸಲಾಯಿತು.
10 ಅಡಿ ಆಳದ ಗುಂಡಿ ತೋಡಿ ಅದರೊಳಗೆ ಬಾಂಬ್ ಇಡಲಾಯ್ತು. ಬಳಿಕ, ಬಾಂಬ್‌ಗೆ ಡಿಟೋನೇಟರ್ ಸಂಪರ್ಕ ಕಲ್ಪಿಸಿ, ದೂರದವರೆಗೆ ವೈರ್ ಅಳವಡಿಕೆ ಮಾಡಲಾಗಿತ್ತು. ಬಾಂಬ್ ಇಟ್ಟಿದ್ದ ಗುಂಡಿಯ ಸುತ್ತಲೂ ಮರಳಿನ ಗೋಣಿ ಚೀಲದ ತಡೆಗೋಡೆ ನಿರ್ಮಿಸಲಾಯ್ತು. ಬಳಿಕ ಡಿಟೋನೇಟರ್ ಚಾಲನೆ ಮಾಡಿ ಬಾಂಬ್ ಸಿಡಿಸಲಾಯ್ತು. ಈ ಸಂದರ್ಭದಲ್ಲಿ ದಟ್ಟ ಹೊಗೆ ಭಾರೀ ಸದ್ದು ಕಾಣಿಸಿಕೊಂಡಿತು. ಈ ಮೂಲಕ ಸುಮಾರು ಎಂಟು ಗಂಟೆಗಳ ಕಾಲ ನಡೆದ ಕಾರ್ಯಾಚರಣೆ ಯಶಸ್ವಿಯಾಗಿದೆ.
ಮಂಗಳೂರಲ್ಲಿ ದೊಡ್ಡ ಅಘಾತ ತಪ್ಪಿದಂತಾಗಿದೆ. ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಲು ಪ್ರತ್ಯೇಕ ಮೂರು ತಂಡ ರಚನೆ ಮಾಡಲಾಗಿದೆ ಎಂದರು ನಗರ ಪೊಲೀಸ್ ಆಯುಕ್ತ ಹರ್ಷಾ ತಿಳಿಸಿದ್ದಾರೆ .



