-ಸೋಮಶೇಖರ್ ಪಂಡಿತರುB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಅಧ್ಯಾತ್ಮಕರು ಹಾಗೂ ಚಿಂತಕರು. Mob._9353 488403
ನಮ್ಮ ಭಾರತ ದೇಶವು ಸಂಸ್ಕೃತಿಯಲ್ಲಿ ಅತ್ಯುನ್ನತ ಸ್ಥಾನ ಪಡೆದುಕೊಂಡಿದೆ.ನಮ್ಮ ದೇಶದಲ್ಲಿ ನೂರಾರು ಆಚಾರ-ವಿಚಾರ ಆಚರಣೆ. ಮಾಡಿಕೊಂಡು ಬಂದಿರುತ್ತೇವೆ. ಅದರಲ್ಲಿ ಒಂದು ಮಕರ ಸಂಕ್ರಮಣ.
ಭಾರತೀಯರ ಮಹಾಪರ್ವಗಳಲ್ಲಿ ಉತ್ತರಾಯಣ ಕಾಲವು ಒಂದು. ಇದನ್ನು ಮಕರ ಸಂಕ್ರಮಣ ಎಂದು ಕರೆಯುತ್ತಾರೆ.ಸೂರ್ಯ ತನ್ನ ಪ್ರಯಾಣವನ್ನು ದಕ್ಷಿಣದಿಂದ ಉತ್ತರಕ್ಕೆ ಪ್ರಾರಂಭಿಸುತ್ತಾನೆ .ಉತ್ತರದಿಕ್ಕಿಗೆ ಎಂದರೆ ಶ್ರೇಷ್ಠತೆಯ ಲಕ್ಷಣ ಎಂದರ್ಥ, ಹಾಗೂ ಕರ್ಕಾಟಕ ದಿನದಲ್ಲಿ ಮಾತ್ರ ಸರಿಯಾಗಿ ಹಗಲು-ರಾತ್ರಿ ಗಮನಿಸಬಹುದು. ಇಲ್ಲಿ ತಮಗೆ ಮುಖ್ಯವಾದ ವಿಷಯ ತಿಳಿಯಬಯಸುತ್ತೇನೆ. ಅದೇನೆಂದರೆ “ಅಯಣ್ ವಿಶಾಂತಿ ಪೂರ್ವಂ, ಅಯಣ್ ವಿಶಂತಿ ಪರಂ ,” ಎಂದರೆ ಉತ್ತರಾಯಣ ಕಾಲ ಹುಟ್ಟಿದ ನಂತರದ 20 ಗಳಿಗೆ ಪುಣ್ಯಕಾಲ ಮತ್ತು ಕರ್ಕಾಟಕ ಮಾಸದಲ್ಲಿ ಸೂರ್ಯ ದಕ್ಷಿಣಕ್ಕೆ ಬೀಳುವ ಮೊದಲು 20 ಗಳಿಗೆ ಈ ಸಮಯವನ್ನು ಪುಣ್ಯಕಾಲ ಅಂತಾರೆ .ಈ ಪುಣ್ಯ ಕಾಲದಲ್ಲಿ ನಾವು ಧ್ಯಾನ, ಪೂಜೆ, ತಪಸ್ಸು, ಆಚರಣೆ ಇತ್ಯಾದಿ ಮಾಡಿದರೆ ಒಳ್ಳೆಯದು ಮಾಡಿದರೆ ತುಂಬಾ ಒಳ್ಳೆಯದು.
ಇನ್ನೊಂದು ಬಹುಮುಖ್ಯ ವಿಷಯ ತಿಳಿಸುತ್ತೇನೆ. ಅದೇನೆಂದರೆ ಸೂರ್ಯನು ಪ್ರತಿ ರಾಶಿಗೆ ಪ್ರವೇಶ ಮಾಡುವಾಗ ಪ್ರತಿಸಾರಿ ಮಕರ ಸಂಕ್ರಮಣ ಆಗುತ್ತದೆ. ಈಗ ಸೂರ್ಯ ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಆದ್ದರಿಂದ ಈ ಕ್ರಿಯೆಗೆ ಮಕರ ಸಂಕ್ರಮಣ ಎಂದು ನಾಮಕರಣವಾಯಿತು.
ಮಕರ ರಾಶಿಗೆ ಸೂರ್ಯ ಪ್ರವೇಶಿಸಿದಾಗ ಹಾಗಾಗಿ ಕಾಲವನ್ನು ಉತ್ತರಾಯಣ ಕಾಲ ಎಂದು ಹೇಳುತ್ತಾರೆ. ಅಯಣ್ ಎಂದರೆ ನಡಿಗೆ .ಆದ್ದರಿಂದ ಸೂರ್ಯನು ದಕ್ಷಿಣದಿಂದ ಉತ್ತರ ದಿಕ್ಕಿಗೆ ನಡೆಯುತ್ತಾನೆ ಆದ್ದರಿಂದ ಉತ್ತರಾಯಣ ಪುಣ್ಯಕಾಲ ಎಂದು ಹೇಳುವುದುಂಟು. ಉತ್ತರಾಯಣ ಕಾಲವು ದೇವ-ದೇವತೆಗಳು ಹಗಲು ಆಗುತ್ತದೆ.
ಈ ಆಚರಣೆಯನ್ನು ವೈದಿಕ ಆಚರಣೆಯಲ್ಲಿ ಹೆಚ್ಚಿನ ಮಹತ್ವ ಪಡೆದಿರುತ್ತದೆ. ಉತ್ತರಾಯಣ ಪುಣ್ಯಕಾಲದಲ್ಲಿ ಜಾತ್ರಾ ಮಹೋತ್ಸವ, ಮದುವೆ, ಗೃಹಪ್ರವೇಶ, ಉಪನಯನ, ಗಳು, ದೇವತಾಕಾರ್ಯಗಳು ವಿಜೃಂಭಣೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಚರಣೆ ಆಗುತ್ತವೆ.ಇನ್ನೊಂದು ವಿಶೇಷವೇನೆಂದರೆ ಈ ಉತ್ತರಾಯಣ ಪುಣ್ಯಕಾಲದಲ್ಲಿ ಪ್ರಾಣಬಿಟ್ಟರು ಮುಕ್ತಿ ಹೊಂದುತ್ತಾರೆ. ದಕ್ಷಿಣಾಯಣದಲ್ಲಿ ಪ್ರಾಣಬಿಟ್ಟರು ಪುನಾವೃತ್ತಿ ಹೊಂದುತ್ತಾರೆ.ಎಂದು ಪುರಾಣ ಶಾಸ್ತ್ರ ಹೇಳುತ್ತದೆ. ಇದರಲ್ಲಿ ಇನ್ನೊಂದು ವಿಶೇಷವೆಂದರೆ ಭೀಷ್ಮಾಚಾರ್ಯ ಉತ್ತರಾಯಣ ಬರುವವರೆಗೂ ಕಾದು ಪ್ರಾಣ ಬಿಟ್ಟಿದ್ದು ಸ್ಮರಿಸಬಹುದು.
ಇಲ್ಲಿ ಇನ್ನೊಂದು ಸಂತಸ ಸುದ್ದಿ ಅದೇನೆಂದರೆ ರೈತಾಪಿ ವರ್ಗದವರಿಗೆ ಸುಗ್ಗಿಯ ದಿನ ಕುಟುಂಬ ಸಮೇತ ಹೊಸಬಟ್ಟೆಗಳನ್ನು ಧರಿಸಿ ಒಂದು ತಟ್ಟಿಯಲ್ಲಿ ಎಳ್ಳು ಬೆಲ್ಲದೊಂದಿಗೆ ಹತ್ತಿರದ ಜನರನ್ನು ಮತ್ತು ಸಂಬಂಧಿಕರನ್ನು ಎಳ್ಳು-ಬೆಲ್ಲ ಹಂಚಿಕೊಂಡು ಅಪ್ಪಿಕೊಂಡು ಸಂತೋಷವನ್ನು ಅನುಭವಿಸುತ್ತಾರೆ.ಇನ್ನೊಂದು ಬಹುಮುಖ್ಯ ವಿಷಯ ಅಯ್ಯಪ್ಪಸ್ವಾಮಿಗೆ ವಿಶೇಷ, ಭಕ್ತರ ಜೊತೆ ಸಂತೋಷ ಹಂಚಿಕೊಳ್ಳುತ್ತಾನೆ. ಅದೇನೆಂದರೆ ಈ ಸಮಯದಲ್ಲಿ ಭಕ್ತರು ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿಕೊಂಡು ಮಕರ ಸಂಕ್ರಮಣದ ‘ಮಕರ ಜ್ಯೋತಿ” ನೋಡಿ ಅಯ್ಯಪ್ಪ ಸ್ವಾಮಿಯ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ.