ಡಿವಿಜಿ ಸುದ್ದಿ, ತುಮಕೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನನ್ನೇನು ಮಂತ್ರಿ ಮಾಡಿಲ್ಲ. ನನಗೂ ಸ್ವಾಭಿಮಾನ ಇದೆ. ನಮ್ಮ ಪಕ್ಷದ ನಾಯಕರು ಸಚಿವ ಸ್ಥಾನ ಬಿಡಿ ಅಂದರೆ ಒಂದು ಕ್ಷಣವೂ ಇರುವುದಿಲ್ಲ ಎಂದಿದ್ದಾರೆ.
ಮಹಿಳೆಗೆ ರಾಸ್ಕಲ್ ಎಂದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹೆಣ್ಣು ಮಕ್ಕಳ ಭಾವನೆಗೆ ನೋವು ಆಗಿದ್ದರೆ ಕ್ಷಮೆ ಕೇಳುತ್ತೇನೆ. ಆ ಹೆಣ್ಣು ಮಗಳು ಪದೇ ಪದೇ ಅನಗತ್ಯವಾಗಿ ಮಾತನಾಡುತ್ತಿದ್ದಳು. ನಾನು ಬೈದ ಮೇಲೆ ಅಣ್ಣ ಅಂದಿದ್ದು, ಅವರ ವರ್ತನೆ ಉದ್ದಟತನವಾಗಿತ್ತು ಎಂದರು.
ಸಿಟ್ಟು ಬಂದಾಗ ಮಾತನಾಡಿದ್ದೇನೆ. ಆದರೆ ಆಕೆಯ ವರ್ತನೆಯ ಬಗ್ಗೆಯೂ ಆಲೋಚಿಸಬೇಕು. ಒಬ್ಬ ಮಂತ್ರಿಯಾಗಿ ಆ ಮಟ್ಟಕ್ಕೆ ಮಾತನಾಡುತ್ತೇನೆ ಅಂದರೆ ಅವರ ವರ್ತನೆ ಹೇಗಿರಬೇಕು ಯೋಚಿಸಿ. ಈ ಘಟನೆ ನಡೆಯಬಾರದಿತ್ತು. ನನಗೂ ಬೇಸರವಾಗಿದೆ ಎಂದರು.



