ಡಿವಿಜಿ ಸುದ್ದಿ: ಹುಳಿಯಾರು: ಕುರುಬ ಸಮಾಜದ ಶ್ರೀಗಳ ವಿರುದ್ಧ ಅವಹೇಳನಕಾರಿಯಾಗಿ ಮತನಾಡಿದ್ದಾರೆ ಎನ್ನಲಾದ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಮಾಧುಸ್ವಾಮಿ ಕ್ಷೆಮೆಗೆ ಆಗ್ರಹಿಸಿ ಹುಳಿಯರಲ್ಲಿ ಪ್ರತಿಭಟನೆ ತೀವ್ರಗೊಂಡಿದೆ.
ಸರ್ಕಾರಿ ಶಾಲಾ-ಕಾಲೇಜು ಗಳು ಯಥಾವತ್ತಾಗಿ ಓಪನ್ ಆಗಿದ್ದವು. ಆದರೆ, ಪ್ರಮುಖ ರಸ್ತೆಗಳಲ್ಲಿಅಂಗಡಿ ಮುಂಗಟ್ಟು ಕ್ಲೋಸ್ ಆಗಿದ್ದವು. ಪ್ರತಿಭಟನಕಾರರು ಹುಳಿಯರು ಪ್ರಮುಖ ಬೀದಿಯಲ್ಲಿ ಸಚಿವರ ವಿರುದ್ಧ ಘೋಷನೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಸಚಿವರ ಪರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕ್ಷಮೆ ಕೇಳಿದ್ದು, ಮಾಧುಸ್ವಾಮಿ ಈ ಕೂಡಲೇ ಕ್ಷಮೆ ಕೇಳಬೇಕು. ಒಂದು ವೇಳೆ ಕ್ಷಮೆ ಕೇಳದಿದ್ದಲ್ಲಿ ಮುಂದಿನ ದಿನದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದರು.



