ಡಿವಿಜಿ ಸುದ್ದಿ, ಚನ್ನಗಿರಿ: ತಾಲ್ಲೂಕಿನ ಕೆರೆ ಒತ್ತುವರಿ ವೀಕ್ಷಣೆಯನ್ನು ದಾವಣಗೆರೆ ಲೋಕಾಯುಕ್ತ ಡಿವೈಎಸ್ಪಿ ಜಿ.ಸಿ. ರವಿಕುಮಾರ್ ನೇತೃತ್ವದಲ್ಲಿ ನಡೆಸಲಾಯಿತು.
ತಾಲೂಕಿನ ಕೋಗಲೂರು, ಬೆಳ್ಳಿಗನೂಡು, ಮೆದಿಕೆರೆ, ಸೂಳೆಕೆರೆ, ಈರಗನಹಳ್ಳಿ, ಕೆಂಪನಹಳ್ಳಿ ಗ್ರಾಮಗಳ ಕೆರೆಗಳನ್ನು ಒತ್ತುವರಿ ವೀಕ್ಷಿಸಿದರು. ಭದ್ರನಾಲ ಉಪವಿಭಾಗದ ಸಹಾಯಕ ಕಾರ್ಯಪಾಲಕ ಜಿಎಂ ಗುಡ್ಡಪ್ಪ ಮಾರ್ಗದರ್ಶನದಲ್ಲಿ ದಾವಣಗೆರೆ ಲೋಕಾಯುಕ್ತ ಡಿವೈಎಸ್ಪಿ ಜಿಸಿ.ರವಿಕುಮಾರ್ , ನಿರೀಕ್ಷಕರಾದ ಟಿಎಸ್ ಮುರುಘೇಶ್ ರವರ ತಂಡವು ಕೆರೆಗಳನ್ನು ಪರಿವೀಕ್ಷಣೆ ನಡೆಸಿದರು. ಸಹಾಯಕ ಇಂಜೀನಿಯರುಗಳಾದ ಹೆಚ್ ತಿಪ್ಪೇಸ್ವಾಮಿ , ವಿಜಯಕುಮಾರ್ ತೇತಂಬಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ತಾಲೂಕಿನಲ್ಲಿ ಕೋಗಲೂರು ಕೆರೆಗೆ ಸಂಬಂದಿಸಿದಂತೆ ಒತ್ತುವರಿಯಾಗಿರುವ ಜಮೀನಿನ ಬಗ್ಗೆ ದಾಖಲೆಗಳು ಗ್ರಾಮಸ್ಥರುಗಳಲ್ಲಿ ಲಭ್ಯವಿದ್ದು, ಉಳಿದಂತೆ ಕೆರೆಗಳ ಸ್ಕೆಚ್ ಇನ್ನಿತರೆ ದಾಖಲೆಗಳು ಭದ್ರನಾಲ ಉಪವಿಭಾಗಧಿಕಾರಿಗಳ ಕಚೇರಿ ದಾಖಲೆಗಳು ಅಸ್ಪಷ್ಟವಾಗಿದ್ದು ಮುಂದಿನ ದಿನಗಳಲ್ಲಿ ಸಂಪೂರ್ಣ ದಾಖಲಾತಿಗಳನ್ನು ಪಡೆದು ಒತ್ತುವರಿಯಾಗಿರುವ ಕೆರೆಗಳನ್ನು ತೆರವುಗೊಳಿಸುವ ಕಾರ್ಯವನ್ನು ಲೋಕಾಯುಕ್ತ ಇಲಾಖೆ ನಡೆಸಲಿದೆ ಎಂದು ಲೋಕಾಯುಕ್ತ ಡಿವೈಎಸ್ಪಿ ಜಿ.ಸಿ. ರವಿಕುಮಾರ್ ತಿಳಿಸಿದರು.