Connect with us

Dvgsuddi Kannada | online news portal | Kannada news online

ದೇಶದ  ಅತ್ಯಂತ ಕಿರಿಯ ನ್ಯಾಯಧೀಶ ಯಾರು ಗೊತ್ತಾ..?

ರಾಷ್ಟ್ರ ಸುದ್ದಿ

ದೇಶದ  ಅತ್ಯಂತ ಕಿರಿಯ ನ್ಯಾಯಧೀಶ ಯಾರು ಗೊತ್ತಾ..?

ಡಿವಿಜಿ ಸುದ್ದಿ, ಜೈಪುರ್:  ಮೊದಲ ಪ್ರಯತ್ನದಲ್ಲಿಯೇ ನ್ಯಾಯಧೀಶ ಆಗುವುದರ ಜೊತೆಗೆ ರಾಜಸ್ಥಾನದ 21 ವರ್ಷದ ಮಯಾಂಕ್ ಪ್ರತಾಪ್ ಸಿಂಗ್ ಅವರು ದೇಶದ ಅತ್ಯಂತ ಕಿರಿಯ ನ್ಯಾಯಾಧೀಶರಾಗಿದ್ದಾರೆ.

ನ್ಯಾಯಾಂಗ ಸೇವೆಯ ಆರ್‌ಜೆಎಸ್ ಮುಖ್ಯ ಪರೀಕ್ಷೆ 2018 ರಲ್ಲಿ ಪರೀಕ್ಷೆ ನಡೆಸಲಾಗಿತ್ತು. ಇದೀಗ  ಫಲಿತಾಂಶ ಪ್ರಕಟಿಸಲಾಗಿದ್ದು, 197 ಅಂಕ ಗಳಿಸಿರುವ ಮಯಾಂಕ್ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಮೂಲಕ ಅತ್ಯಂತ ಕಿರಿಯ ವಯಸ್ಸಿನಲ್ಲಿ ನ್ಯಾಯಧೀಶನಾದ ಕೀರ್ತಿ ಪ್ರತಾಪ್ ಸಿಂಗ್ಗೆ ಸಲ್ಲುತ್ತದೆ. ಇದಲ್ಲದೆ ಮೊದಲ ಪ್ರಯತ್ನದಲ್ಲಿಯೇ ಪರೀಕ್ಷೆ ಪಾಸ್ ಮಾಡಿದ್ದಾನೆ.

187.5 ಅಂಕ ಪಡೆದಿರುವ ತನ್ವಿ ಮಾಥುರ್ ಎರಡನೇ ಸ್ಥಾನದಲ್ಲಿದ್ದಾರೆ. ಈ ಮೂಲಕ ಮಹಿಳಾ ವಿಭಾಗದಲ್ಲಿ ತನ್ವಿ ರಾಜ್ಯದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಸಂದರ್ಶನದಲ್ಲಿ ಹಾಜರಾದ 499 ಅಭ್ಯರ್ಥಿಗಳ ಪೈಕಿ 197 ಜನರನ್ನು ಆಯ್ಕೆ ಮಾಡಲಾಗಿದೆ.

ಮಯಾಂಕ್ ಕೇವಲ 21 ವರ್ಷ 10 ತಿಂಗಳು 9 ದಿನಗಳ ವಯಸ್ಸಿನಲ್ಲಿ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಷ್ಟೇ ಅಲ್ಲದೆ ಮೊದಲ ಪ್ರಯತ್ನದಲ್ಲಿ ಅಗ್ರಸ್ಥಾನದಲ್ಲಿ ಪಾಸಾಗಿದ್ದಾರೆ. ಆರ್‌ಜೆಎಸ್ ಪರೀಕ್ಷೆಗೆ ಹಾಜರಾಗಲು ಈ ಹಿಂದೆ ಕನಿಷ್ಠ ವಯಸ್ಸು 23 ನಿಗದಿಯಾಗಿತ್ತು. ಆದರೆ ಈ ವರ್ಷ ಅದನ್ನು 21 ವಯಸ್ಸಿಗೆ ಇಳಿಸಲಾಗಿದೆ.

ಮಯಾಂಕ್ ತಂದೆ ರಾಜ್‍ಕುಮಾರ್ ಸಿಂಗ್ ಮತ್ತು ತಾಯಿ ಡಾ.ಮಂಜು ಸಿಂಗ್ ಶಿಕ್ಷಕರಾಗಿದ್ದಾರೆ. 2014ರಲ್ಲಿ ರಾಜಸ್ಥಾನ್ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡ ಮಯಾಂಕ್, ಇದೇ ವರ್ಷ ಅವರು 5 ವರ್ಷಗಳ ಎಲ್‍ಎಲ್‍ಬಿ ವ್ಯಾಸಂಗ ಪೂರ್ಣಗೊಳಿಸಿದರು. ಈ ಮಧ್ಯೆ 2018ರಲ್ಲಿ ಆರ್‌ಜೆಎಸ್ ಪರೀಕ್ಷೆ ಬರೆದು, ಮೊದಲ ಸ್ಥಾನದಲ್ಲಿಯೇ ಉತ್ತೀರ್ಣರಾಗಿದ್ದಾರೆ. ಈ ಸಾಧನೆಯು ಮಯಾಂಕ್ ಅವರಿಗೆ ವಿಶೇಷವಾಗಿದೆ. ಏಕೆಂದರೆ ಅವರು ತಮ್ಮ ಕುಟುಂಬದಲ್ಲಿ ಕಾನೂನು ಕ್ಷೇತ್ರಕ್ಕೆ ಹೋದ ಮೊದಲ ವ್ಯಕ್ತಿಯಾಗಿದ್ದಾರೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

To Top