ಡಿವಿಜಿ ಸುದ್ದಿ, ಬೆಂಗಳೂರು: ದೇಶವ್ಯಾಪಿ ಲಾಕ್‌ಡೌನ್ ಮೇ .17 ವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ಹೊಸ ಮಾರ್ಗ ಸೂಚಿ ಹೊರಡಿಸಿದ್ದು, ಕೆಲವು ನಿರ್ಬಂಧ ವಿಧಿಸಿ ಆರ್ಥಿಕ ಚಟುವಟಿಕೆ ನಡೆಸಲು ಅವಕಾಶ ಕಲ್ಪಿಸಿಕೊಟ್ಟಿದೆ.
ರೆಡ್, ಆರೆಂಜ್ , ಗ್ರೀನ್ ಜೋನ್ ಆಗಿ ವರ್ಗೀಕರಿಸಿರುವ ಕೇಂದ್ರ ಸರ್ಕಾರ ನಿರ್ಬಂಧಿತ ವಲಯ ಹೊರತು ಪಡಿಸಿ ಉಳಿದ ಕಡೆ ಅರ್ಥಿಕ ಚಟುವಟಿಕೆಗೆ ಅವಕಾಶ ನೀಡಿದೆ. ಅದರೆ, ಅಂತರ ರಾಜ್ಯ ವಾಹನ ಸಂಚಾರ, ವಿಮಾನ ಮತ್ತು ರೈಲು ಸೇವೆಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ.
ಕೇಂದ್ರದ ಆರೋಗ್ಯ ಸಚಿವಾಲಯವು ದೇಶದ 130 ಜಿಲ್ಲೆಗಳನ್ನು ರೆಡ್ ಜೋನ್, 284 ಜಿಲ್ಲೆಗಳನ್ನು ಆರೆಂಜ್ ಜೋನ್ ಹಾಗೂ 319 ಜಿಲ್ಲೆಗಳನ್ನು ಗ್ರೀನ್ ಜೋನ್ ಎಂದು ಪಟ್ಟಿ ಮಾಡಿದೆ.
ಏನು ಓಪನ್ ಇರಲಿದೆ
ಅಗತ್ಯ ವಸ್ತುಗಳ ಪೂರೈಕೆ
ಮೆಡಿಕಲ್ ಶಾಪ್
ಅನುಮತಿ ಪಡೆದ ಉದ್ದೇಶಗಳಿಗೆ ಮಾತ್ರ ರೈಲು ಮತ್ತು ವಿಮಾನ ಸಂಚಾರಕ್ಕೆ ಅವಕಾಶ
ಶೇ 33ರಷ್ಟು ಸಿಬ್ಬಂದಿಯೊಂದಿಗೆ ಖಾಸಗಿ ಕಂಪನಿಗಳ ಕಾರ್ಯಚಟುವಟಿಕೆ
ಕಾರುಗಳಲ್ಲಿ ಇಬ್ಬರು ಮತ್ತು ದ್ವಿಚಕ್ರ ವಾಹನಗಳಲ್ಲಿ ಒಬ್ಬರು ಸಂಚರಿಸಲು ಮಾತ್ರ ಅವಕಾಶ
ಆಸ್ಪತ್ರೆಗಳ ಹೊರ ರೋಗಿ ವಿಭಾಗಗಳು ಮತ್ತು ಕ್ಲಿನಿಕ್‌ಗಳನ್ನು ತೆರೆಯಲು ಅವಕಾಶ ಇದೆ
ಮದ್ಯ, ತಂಬಾಕು, ಪಾನ್ ಮಾರಾಟಕ್ಕೆ ಅವಕಾಶ
ಏನು ಇರಲ್ಲ
ಬಸ್, ರೈಲು , ವಿಮಾನ ಸೇವೆ
ಧಾರ್ಮಿಕ ಸ್ಥಳಗಳು, ಪ್ರಾರ್ಥನಾ ಸ್ಥಳಗಳು ತೆರೆಯುವಂತಿಲ್ಲ
ಚಿತ್ರಮಂದಿರ, ಮಾಲ್, ಜಿಮ್,
ರಾಜಕೀಯ ಪಕ್ಷಗಳ ಸಮಾವೇಶ
ಶಿಕ್ಷಣ, ತರಬೇತಿ, ಕೋಚಿಂಗ್ ಸಂಸ್ಥೆಗಳು
ಹೋಟೆಲ್, ರೆಸ್ಟೊರೆಂಟ್
ಸೆಲೂನ್‌ಗಳನ್ನೂ ತೆರೆಯುವಂತಿಲ್ಲ
ಕಂಟೈನ್‌ಮೆಂಟ್ ವಲಯದ ಹೊರ ವಲಯಗಳಲ್ಲಿ ಸೈಕಲ್ ರಿಕ್ಷಾ, ಆಟೊ ರಿಕ್ಷಾ, ಟ್ಯಾಕ್ಸಿಸೇವೆಗೆ ಅವಕಾಶ ಇಲ್ಲ.



