ಡಿವಿಜಿ ಸುದ್ದಿ, ಚಾಮರಾಜನಗರ: ಲಾಕ್‍ಡೌನ್ ಮುಗಿದ ನಂತರ sslc ಪರೀಕ್ಷೆ ನಡೆಸಲಾಗುವುದು. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಸುರೇಶ್ ಕುಮಾರ್, ಪರೀಕ್ಷೆಯನ್ನು ಯಾವ ಸಮಯದಲ್ಲಿ ಮಾಡಬೇಕು, ಮಕ್ಕಳಿಗೆ ಎಷ್ಟು ಸಮಯ ನೀಡಬೇಕು ಎಂಬುದರ ಬಗ್ಗೆ ಲಾಕ್ ಡೌನ್ ಮುಗಿದ ನಂತರ ತೀರ್ಮಾನ ಮಾಡುತ್ತೇವೆ.
sslc ಸಿ ಪರೀಕ್ಷೆಗಿಂತ ಕೊರೊನಾ ವಿರುದ್ಧ ಹೋರಾಟ ದೊಡ್ಡ ಪರೀಕ್ಷೆ. ಮೇ 3 ರ ನಂತರ ತೀರ್ಮಾನ ಕೈಗೊಳ್ಳುತ್ತೇವೆ. ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸುವುದು ಬೇಡ. ಪರೀಕ್ಷೆ ನಡೆದೇ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.
ಪಾದರಾಯನಪುರ ಗಲಾಟೆ ಆರೋಪಿಗಳನ್ನು ರಾಮನಗರ ಜೈಲಿಗೆ ಶಿಪ್ಟ್ ಮಾಡಿದ ನಂತರ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಪಾದರಾಯನಪುರ ಗಲಾಟೆ ಆರೋಪಿಗಳನ್ನು ಶಿಪ್ಟ್ ಮಾಡಿದ್ದು ಆಡಳಿತಾತ್ಮಕ ನಿರ್ಣಯ.ಈ ವಿಚಾರದಲ್ಲಿ ರಾಜಕೀಯ ಮಾಡೋದು ಸರಿಯಲ್ಲ. ರಾಜ್ಯ ಸರ್ಕಾರ ಯಾವುದೋ ಒಂದು ಜಿಲ್ಲೆಯನ್ನ ರೆಡ್ ಝೋನ್ ಮಾಡಲು ಕರೆದುಕೊಂಡು ಹೋಗಲ್ಲ ಎಂದರು.