ಡಿವಿಜಿ ಸುದ್ದಿ, ದಾವಣಗೆರೆ: ಲಾಕ್‍ಡೌನ್ ವೇಳೆ ಹಣ್ಣು, ತರಕಾರಿ ಬೆಳೆದು ಸಂಕಷ್ಟಕ್ಕೆ ಒಳಗದ ರೈತರಿಗೆ ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ ಸರ್ಕಾರ ಪರಿಹಾರ ಘೋಷಿಸಿದ್ದು, ರೈತರು ಅಗತ್ಯ ದಾಖಲಾತಿ ಸಲ್ಲಿಸದ ಕಾರಣ ಪರಿಹಾರ ವಿಳಂಬವಾಗುತ್ತಿದೆ. ಕೂಡಲೇ ಸಂಬಂಧಪಟ್ಟ ರೈತರು ಆಗಸ್ಟ್ 31 ರೊಳಗೆ ದಾವಣಗೆರೆ ತಾಲ್ಲೂಕು ತೋಟಗಾರಿಕೆ ದಾಖಲಾತಿ ಸಲ್ಲಿಸಲು ಸೂಚಿಸಲಾಗಿದೆ.
2019-20 ನೇ ಸಾಲಿನ ಬೆಳೆ ಸಮೀಕ್ಷೆಯಲ್ಲಿರುವ ದಾವಣಗೆರೆ ತಾಲ್ಲೂಕಿನ ರೈತ ಬಾಂಧವರು ಅಗತ್ಯ ದಾಖಲಾತಿಗಳಾದ ಪ್ರಸಕ್ತ ಸಾಲಿನ ಪಹಣಿ, ಆಧಾರ್ ಕಾರ್ಡ್, ಚಾಲ್ತಿಯಲ್ಲಿರುವ ಬ್ಯಾಂಕ್ ಪಾಸ್‍ಪುಸ್ತಕದ ಜೆರಾಕ್ಸ್ ಪ್ರತಿ, ಫಲಾನುಭವಿ ಮರಣ ಹೊಂದಿದ್ದಲ್ಲಿ ಮರಣ ದೃಢೀಕರಣ ಪತ್ರ ಇತ್ಯಾದಿ ಸಲ್ಲಿಸದೇ ಇರುವ ಕಾರಣ ಪರಿಹಾರ ವಿತರಣೆ ವಿಳಂಬವಾಗುತ್ತಿದೆ.
ರೈತರು ಆ.31 ರೊಳಗೆ ದಾವಣಗೆರೆ ತಾಲ್ಲೂಕಿನ ತೋಟಗಾರಿಕೆ ಕಚೇರಿಯಲ್ಲಿ ಈ ದಾಖಲಾತಿಗಳನ್ನು ಸಲ್ಲಿಸಬೇಕೆಂದು ದಾವಣಗೆರೆ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಶಶಿಕಲಾ ಟಿ.ಆರ್. ವಿನಂತಿಸಿದ್ದಾರೆ.



