ಡಿವಿಜಿ ಸುದ್ದಿ, ಬಳ್ಳಾರಿ: ಕಬ್ಬಿಣ ರಾಡ್ ತುಂಬಿಕೊಂಡು ನಿಂತಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಂಡಕ್ಟರ್ ದೇಹಕ್ಕೆ ಕಬ್ಬಿಣದ ರಾಡ್ ಚುಚ್ಚಿರುವ ಘಟನೆ ಜಿಲ್ಲೆಯ ಕೂಡ್ಲಿಗಿ ಹೊರವಲಯದಲ್ಲಿ ನಡೆದಿದೆ.
ಕೂಡ್ಲಿಗಿ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಈ ಘಟನೆ ನಡೆದಿದ್ದು, ಕಬ್ಬಿಣದ ರಾಡ್ ತುಂಬಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಬಸ್ ಎಡ ಭಾಗದಲ್ಲಿ ಕುಳಿತಿದ್ದ ಕಂಡಕ್ಟರ್ ಹೊಟ್ಟೆಗೆ ಕಬ್ಬಿಣದ ರಾಡ್‍ಗಳು ಚುಚ್ಚಿವೆ.
ಸ್ಥಳೀಯರು ಕಂಡಕ್ಟರ್‌ಗೆ ಚುಚ್ಚಿರುವ ರಾಡ್‍ಗಳನ್ನ ಕತ್ತರಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಕಂಡಕ್ಟರ್ ಸ್ಥಿತಿ ಗಂಭೀರವಾಗಿದೆ. ಈ ಕುರಿತು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



