ಡಿವಿಜಿ ಸುದ್ದಿ, ಬೆಂಗಳೂರು: ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆ ಮಾಡಿ, ಪಕ್ಷವನ್ನು ಕಟ್ಟಬೇಕಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಪ್ರತಿಜ್ಞಾ ಸ್ವೀಕರಿಸಿ ಮಾತನಾಡಿದ ಅವರು, ನನಗೆ ಯಾವುದೇ ಗುಂಪು, ಜಾತಿ, ಧರ್ಮದಲ್ಲಿ ನಂಬಿಕೆ ಇಲ್ಲ. ನಮ್ಮದೇನಿದ್ದರೂ ಕಾಂಗ್ರೆಸ್ ಗುಂಪು, ಕಾಂಗ್ರೆಸ್ ಧರ್ಮ, ಕಾಂಗ್ರೆಸ್ ಜಾತಿ ಎಂದರು.
ಕೇರಳ ಮಾದರಿಯಲ್ಲಿ ಪಕ್ಷ ಕಟ್ಟಬೇಕು. ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಶಕ್ತರಾದರೆ, ಅದು ಕಾಂಗ್ರೆಸ್ ಶಕ್ತಿಆಗಲಿದೆ. ಕಾರ್ಯಕರ್ತರು ದುರ್ಬಲರಾದರೆ ಕಾಂಗ್ರೆಸ್ ಪಕ್ಷ ಕೂಡ ದುರ್ಬಲವಾಗಲಿದೆ. ಇದರಿಂದ ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ಮತ್ತೊಮ್ಮ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಕರೆ ನೀಡಿದರು.

ಸೋನಿಯಾ ಗಾಂಧಿ ಅವರು ನನ್ನ ಮೇಲೆ ಅಪಾರ ನಂಬಿಕೆ ಇಟ್ಟು ನನಗೆ ಈ ಸ್ಥಾನ ಕೊಟ್ಟಿದ್ದಾರೆ. ಈ ಅಧ್ಯಕ್ಷ ಸ್ಥಾನದ ಹಂಬಲ ಇಲ್ಲ. ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಡಿಕೆಶಿ ರಾಜಕೀಯ ಇತಿಹಾಸ ಮುಗಿತು ಎನ್ನುವಾಗ ತಿಹಾರ್ ಜೈಲಿಗೆ ಬಂದು 1 ಗಂಟೆ ಕಾಲ ಮಾತನಾಡಿ ನಿನ್ನ ಜೊತೆಗೆ ನಾನಿದ್ದೇನೆ. ಪಕ್ಷದ ಜವಾಬ್ದಾರಿ ತೆಗೆದುಕೊಳ್ಳಿ ಎಂದು ಸೋನಿಯಾ ಗಾಂಧಿ ಅವರು ಆತ್ಮಸ್ಥೈರ್ಯ ತುಂಬಿದರು. ಗಾಂಧಿ ಕುಟುಂಬ ಕೊಟ್ಟ ಶಕ್ತಿಯನ್ನ ನಾನು ಜೀವದ ರಕ್ತದ ಕಣದಲದಲ್ಲಿದೆ ಎಂದು ತಿಳಿಸಿದರು.
ನನ್ನನ್ನು ಕೆಲವರು ಬಂಡೆ ಅಂತಾ ಕರೆಯುತ್ತಾರೆ. ಬಂಡೆಗೆ ಉಳಿ ಬಿದ್ದರೆ ಚಪ್ಪಡಿಯೂ ಆಗುತ್ತದೆ. ದ್ವಾರದಲ್ಲಿರುವ ಕಂಬವೂ ಆಗುತ್ತದೆ. ನಾನು ಕೇವಲ ಬಂಡೆಯಾಗಲು ಇಷ್ಟ ಪಡಲ್ಲ. ಉಳಿ ಏಟು ತಿಂದು ವಿಧಾನಸೌಧದ ಚಪ್ಪಡಿ ಆಗುತ್ತೇನೆ ಎಂದರು.
ನಾನು ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಟ್ಟವನು. ಜೊತೆಗೂಡುವುದು ಆರಂಭ. ಜೊತೆಗೂಡಿ ಯೋಚಿಸುವುದು ಪ್ರಗತಿ. ಜೊತೆಗೂಡಿ ಆಗುವುದು ಅಭಿವೃದ್ಧಿ. ನಾನು ಮೊದಲು ಕಾರ್ಯಕರ್ತ ಆಮೇಲೆ ಈ ಸ್ಥಾನ. ನಾನು ಯಾರಿಗು ದ್ರೋಹ ಮಾಡಿಲ್ಲ. ಬಂಗಾರಪ್ಪ, ಕೃಷ್ಣ ಅವರು, ಧರ್ಮ ಸಿಂಗ್, ಸಿದ್ದರಾಮಯ್ಯ ಎಲ್ಲರ ಜೊತೆ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.
Pratijna Dina of DK Shivakumar https://t.co/SZ66s1dueJ
— D K Shivakumar, President, KPCC (@KPCCPresident) July 2, 2020



