ಡಿವಿಜಿ ಸುದ್ದಿ, ಉಚ್ಚಂಗಿದುರ್ಗ: ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟುರೇಶ್ವರ ಜಾತ್ರೆಗೆ ಪಾದಯಾತ್ರೆ ಮೂಲಕ ಕಂಚಿಕೆರೆ-ಅರಸೀಕೆರೆ ಮಾರ್ಗವಾಗಿ ಸಾಗುತ್ತಿದ್ದ ಭಕ್ತರಿಗೆ ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಅವರು ಕುಶಲೋಪರಿ ವಿಚಾರಿಸಿದರು.
ದಾವಣಗೆರೆ, ಹಾವೇರಿ, ಶಿವಮೊಗ್ಗ ಜಿಲ್ಲೆಯ ಸಾವಿರಾರು ಭಕ್ತರು ಬಿರು ಬಿಸಿಲ ಝಳ ಲೆಕ್ಕಿಸದೆ ಬಾಯಾರಿಕೆಗಳಿಂದ ಬಳಲಿದ್ದ ಪಾದಯಾತ್ರಿಗಳಿಗೆ ಸಂಸದರು ಪ್ರಸಾದ ವಿತರಣೆ ಮಾಡಿದರು. ಸಾವಿರಾರು ಭಕ್ತರು ಕೋಲಶಾಂತೇಶ್ವರ ಮಠದ ಆವರಣದಲ್ಲಿ ವಿಶ್ರಾಂತಿ ಪಡೆದು ಮುಂದೆ ಸಾಗಿದರು.ಯುವಕರು, ಮಧ್ಯವಯಸ್ಕರು, ವೃದ್ಧಾಪ್ಯದ ಬಳಿ ಇರುವವರು ಕೈಯಲ್ಲಿ ಕೋಲು, ಬ್ಯಾಟರಿ, ಬ್ಯಾಗ್, ಬಟ್ಟೆ, ನೀರನ್ನು ಹಿಡಿದು ಕೊಟ್ಟೂರು ಗ್ರಾಮದವರೆಗೂ ನಡೆದುಕೊಂಡೇ ಪಾದಯಾತ್ರಿಗಳು ಜಾತಿ-ಧರ್ಮದ ಬೇಧ ಇಲ್ಲದೇ ಎಲ್ಲರೂ ಒಟ್ಟಾಗಿ ಸಾಗುತ್ತಿದ್ದರು.
ಎಂಪಿ ವೀಣಾ ಮಹಾಂತೇಶ್ ಮತ್ತು ಅವರ ಅಭಿಮಾನ ಬಳಗದಿಂದ ಪ್ರಾಥಮಿಕ ಆರೋಗ್ಯ ಚಿಕಿತ್ಸೆ , ಔಷಧಿ , ನೀರು ಹಾಗೂ ಹಣ್ಣು-ಹಂಪಲು ವಿತರಣೆ ಮಾಡಿದರು. ವಿವಿಧ ಫಾರ್ಮಸಿಗಳು ಔಷಧ, ಗ್ಲುಕೋಸ್, ಬ್ಯಾಂಡೇಜ್, ಗ್ಯಾಸ್ಟ್ರಿಕ್ ಹಾಗೂ ಮಧುಮೇಹದ ಮಾತ್ರೆಗಳು, ಕಾಲು ನೋವು, ಗಾಯಗಳಿಗೆ ಲೋಷನ್ ಗಳ ವ್ಯವ್ಯಸ್ಥೆಯನ್ನು ಕಂಚಿಕೆರೆ, ಮತ್ತಿಹಳ್ಳಿ ಹಾಗೂ ಅರಸೀಕೆರೆಗಳಲ್ಲಿ ಪಾದಯಾತ್ರಿಗಳಿಗೆ ವಿತರಿಸುತ್ತಿದ್ದರು.
ಕೊಟ್ಟುರೇಶ್ವರ ರಥೋತ್ಸವಕ್ಕೆ ರಾಜ್ಯಾದ್ಯಂತ 20 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಎರಡು ದಿನಗಳ ಕಾಲ ಭಕ್ತರು ನಿರಂತರವಾಗಿ ಮಠ ಸೇರಿದಂತೆ ಗ್ರಾಮದ ದೇವಾಲಯ, ಸಾರ್ವಜನಿಕ ಸ್ಥಳಗಳಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಈ ನಿಟ್ಟಿನಲ್ಲಿ ಭಕ್ತರ ಮೂಲಭೂತ ಸೌಕರ್ಯ ಒದಗಿಸಲು 50 ಲಕ್ಷ ಅನುದಾನ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಸಂಸದ ವೈ. ದೇವೇಂದ್ರಪ್ಪ ಹೇಳಿದರು.
ಇನ್ನು ಪಾದಯಾತ್ರೆಯಲ್ಲಿ ಪಾಲ್ಗೊಂಡ ಬಹುತೇಕ ಭಕ್ತರು ರಸ್ತೆಯ ಕುರಿತು ದೂರು ನೀಡಿದ್ದಾರೆ. ಕಂಚಿಕೆರೆ-ಅರಸೀಕೆರೆ ರಸ್ತೆಯು ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿದ್ದು, 22 ಕೋಟೆ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ ಎಂದರು.