ಡಿವಿಜಿ ಸುದ್ದಿ, ಚನ್ನಗಿರಿ: ಸಿಸಿ ಟಿವಿ, ಬಯೋ ಮೆಟ್ರಿಕ್ , ನುರಿತ ಶಿಕ್ಷಕರನ್ನು ನೋಡಿದರೆ ಯಾವ ಹೈಟೆಕ್ ಖಾಸಗಿ ಶಾಲೆಗೂ ಕಡಿಮೆ ಇಲ್ಲ , ಕೋಗಲೂರಿ ಶ್ರೀ ತರಳಬಾಳು ಸರ್ಕಾರಿ ಪೌಢಶಾಲೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಮಂಜುನಾಥ್ ಹೇಳಿದರು.
ಕೋಗಲೂರಿನ ತರಳಬಾಳು ಜದ್ಗುರು ಸರ್ಕಾರಿ ಪ್ರೌಢ ಶಾಲೆಯ ಸಿರಿ ಸಂಭ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಶಾಲೆಯ ಕಾಲಿಟ್ಟ ಕೂಡಲೆ ನಾವುಗಳು ಏನಾದರೂ ಕಲಿಯಬೇಕೆಂಬ ಭಾವನೆ ನಮ್ಮಲ್ಲಿ ಉಂಟಾಗುತ್ತದೆ. ಅಷ್ಟರ ಮಟ್ಟಿಗೆ ಸುಸಜ್ಜಿತ ಕೊಠಡಿಗಳು, ಸಿಸಿಟಿವಿ , ನುರಿತ ಶಿಕ್ಷಕರು , ಉತ್ತಮ ಬೋಧನೆ ಒಳಗೊಂಡಿದೆ. ಈ ಶಾಲೆಯಲ್ಲಿ ವಿಧ್ಯಾರ್ಥಿಗಳು ಅತಿ ಹೆಚ್ಚಿನ ಅಂಕಗಳನ್ನು ಗಳಿಸಿರುವುದನ್ನು ನೋಡಿದರೆ ಮಲೆನಾಡು ಪ್ರದೇಶದ ವಾತವರಣ ನೋಡಿದಂತಾಗುತ್ತದೆ ಎಂದರು.
ರಾಜ್ಯದಲ್ಲಿಯೇ ಸರ್ಕರಿ ಶಾಲೆಗಳಲ್ಲಿ ಬಯೋಮೆಟ್ರಿಕ್ ಅಳವಡಿಸಿರವುದು ನನಗೆ ಮಾಹಿತಿ ಇಲ್ಲ. ಆದರೂ ಈ ಶಾಲೆಯಲ್ಲಿ ಈ ಭಯೋಮೆಟ್ರಿಕ್ ವ್ಯೆವಸ್ಥೆ ,ಕಂಪ್ಯೂಟರ್ ಶಿಕ್ಷಣಾ ಇದೆಲ್ಲಾವನ್ನೂ ನೋಡಿದರೆ ಶ್ರೀ ತರಳಬಾಳು ಸರ್ಕಾರಿ ಪ್ರೌಢಶಾಲೆ ರಾಜ್ಯದ ಯಾವ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲ. ಈ ಊರಿನ ಗ್ರಾಮಸ್ಥರು ಹಾಗೂ ಈ ಶಾಲೆಯ ಹಳೆಯ ವಿಧ್ಯಾರ್ಥಿಗಳ ಸಹಾಯದಿಂದ , ಶಿಕ್ಷಕರಿಂದ ಈ ಶಾಲೆ ಉನ್ನತ ಮಟ್ಟಕ್ಕೆರಿರುವುದು ನನಗೆ ತುಂಬಾ ಹೆಮ್ಮೆ ಅನಿಸುತ್ತದೆ ನಮ್ಮ ಇಲಾಖೆ ವತಿಯಿಂದ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಹೇಳಿದರು.
ಜಿಪಂ ಅಧ್ಯಕ್ಷೆ ಯಶೋದಮ್ಮ ಮರುಳಪ್ಪ ಮಾತನಾಡಿ, ಪೋಷಕರು ಶಿಕ್ಷಕರು ಹಾಗೂ ವಿಧ್ಯಾರ್ಥಿಗಳು ತ್ರಿವೇಣಿ ಸಂಗಮವಿದ್ದಂತೆ ನೀವುಗಳು ಪರಸ್ಪರ ಹೊಂದಾಣಿಕೆ ಇದ್ದರೆ ಮಾತ್ರ ವಿಧ್ಯಾರ್ಥಿಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತಿಳಿಸಿದರು.
ಪ್ರೊ. ಡಾ. ದಾದಾಪೀರ್ ನವಿಲೆಹಾಳ್ ಮಾತನಾಡಿ, ವಿದ್ಯಾರ್ಥಿಗಳು ಯಾವ ರೀತಿಯಾಗಿ ವಿದ್ಯಾಭ್ಯಾಸ ಮಾಡಬೇಕು ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು ಹಾಗೂ ಮೊಬೈಲ್‌ಗಳಿಂದ ದೂರವಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ನೀಡಿದರು. ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷಿಣಿಯಾದ ಶ್ರೀಮತಿ ಉಷಾ ಶಶಿಕುಮಾರ್ , ವೀಣಾಕುಮಾರಿ ,ಸಾಕಮ್ಮಗಂಗಾದರನಾಯ್ಕ , ಅನುಭಾಗ್ಯಮ್ಮ, ಶಂಕರಮ್ಮ ,ಪ್ರಭಾರ ಪ್ರಾಂಶುಪಾಲರಾದ ಬಸವರಾಜಪ್ಪ , ಹರೋನಹಳ್ಳಿ ಸ್ವಾಮಿ ರಾಜ್ಯ ಪ್ರಶಸ್ತಿ ಪುರಸ್ಕೃತರು , ಹಿರಿಯ ಶಿಕ್ಷಕರಾದ ಎಂಬಿ ಪ್ರಭಾಕರ್ .ಹಾಗೂ ಶಿಕ್ಷಕ ವರ್ಗದವರು ,ಮಾನಸ ಕಾನ್ವೆಂಟ್ ಆಡಳಿತಾಧಿಕಾರಿ ಬಸವನಗೌಡ್ರು, ಗ್ರಾಮದ ಮುಖಂಡರುಗಳು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.